ಜಕಾರ್ತ: ಇಂಡೋನೇಷ್ಯಾದ ಉತ್ತರ ಭಾಗದಲ್ಲಿ ಗುರುವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪದ ಬೆನ್ನಲ್ಲೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿತ್ತು. ಕೆಲವು ತಾಸಿನ ಬಳಿಕ ಸುನಾಮಿ ಆತಂಕ ದೂರವಾಗಿದೆ ಎಂದು ಇಂಡೋನೇಷ್ಯಾದ ಹವಾಮಾನ ಇಲಾಖೆ ತಿಳಿಸಿದೆ. ಸಾಗರದಾಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ. ಹಲವು ಕಡೆಗಳಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ.

ಉತ್ತರ ಸುಲವೇಸಿ ಪ್ರಾಂತ್ಯದ ಬಿಟುಂಗ್ ಹಾಗೂ ಉತ್ತರ ಮಾನಡೊ ಪ್ರಾಂತ್ಯದಲ್ಲಿ 10ರಿಂದ 20 ಸೆಕೆಂಡುಗಳ ಕಾಲ ಬಲವಾದ ಕಂಪನ ಉಂಟಾಗಿದೆ.

— upuknews (@upuknews1) April 2, 2026