ಇಂಡೋನೇಷ್ಯಾ: ಜಕಾರ್ತದ ಗುಣುಂಗ್ ಸಹಾರಿ ರಸ್ತೆಯಲ್ಲಿ ನಡೆದ ಈ ಘಟನೆ ಈಗ ಹೊಸ ತಿರುವು ಪಡೆದುಕೊಂಡಿದೆ. ಕಪ್ಪು ಬಣ್ಣದ ಟೊಯೋಟಾ ಕ್ಯಾಲ್ಯ ಕಾರಿನ ಚಾಲಕ ಹಫೀಜ್ ಮಹೇಂದ್ರ (25) ಎಂಬಾತನನ್ನು ಪೊಲೀಸರು ತಡೆಯಲು ಯತ್ನಿಸಿದಾಗ ಆತ ನಿಲ್ಲಿಸದೆ ಅತಿವೇಗವಾಗಿ ರಾಂಗ್ ರೂಟ್‌ನಲ್ಲಿ ನುಗ್ಗಿದ್ದಾನೆ.

ಈ ವೇಳೆ ಹಲವು ಬೈಕ್ ಮತ್ತು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರನ್ನು ಸುತ್ತುವರಿದ ಸಾರ್ವಜನಿಕರು ಮತ್ತು ಪೊಲೀಸರು ಆತನನ್ನು ಬಂಧಿಸಿದಾಗ ಬೆಚ್ಚಿಬೀಳಿಸುವ ಸತ್ಯ ಬಯಲಾಗಿದೆ. ಕಾರಿನೊಳಗೆ ಮಾರಕಾಸ್ತ್ರಗಳು (ಕೊಡಲಿ, ಚಾಕು), ನಾಲ್ಕು ಜೊತೆ ನಕಲಿ ನಂಬರ್ ಪ್ಲೇಟ್‌ಗಳು ಮತ್ತು ಆಟದ ಪಿಸ್ತೂಲ್ ಪತ್ತೆಯಾಗಿವೆ. ನಕಲಿ ನಂಬರ್ ಪ್ಲೇಟ್ ಬಳಸಿ ಸಿಕ್ಕಿಬೀಳುವ ಭೀತಿಯಿಂದ ಈತ ಈ ಅಟ್ಟಹಾಸ ಮೆರೆದಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

View this post on Instagram

A post shared by News Karnataka (@newskarnataka)