ತುಮಕೂರು : ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ವಾರ್ಷಿಕ ಮಹೋತ್ಸವವು ಏ.17 ರಿಂದ ಏ. 26 ರವರೆಗೆ ನಡೆಯಲಿದೆ ಎಂದು ಶ್ರೀ ವಿದ್ಯಾ ಚೌಡೇಶ್ವರಿ ಮಹಾ ಸಂಸ್ಥಾನ ಮಠದ ಶ್ರೀ ವಿದ್ಯಾನಂದ ಸ್ವಾಮೀಜಿ ಹೇಳಿದರು.
ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಶೃಂಗೇರಿ, ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕೆ.ಜಿ. ದೇವಪಟ್ಟಣ ಹಂಗರಹಳ್ಳಿ ಗ್ರಾಮದ
ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1948 ನೇ ಪರಾಭವ ನಾಮ ಸಂವತ್ಸರ ಉತ್ತರಾಯಣ ಚೈತ್ರ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ರೇವತಿ ನಕ್ಷತ್ರ 17-04-2026 ಶುಕ್ರವಾರ ಆರಂಭಗೊಂಡು ದಿನಾಂಕ 26-04-2026 ಭಾನುವಾರದವರೆಗೆ ಅಮ್ಮನವರ ವಾರ್ಷಿಕೋತ್ಸವದ ಅಂಗವಾಗಿ ಪ್ರತಿನಿತ್ಯ ಶ್ರೀಮಠದ ಆವರಣದಲ್ಲಿ ಸಾಯಂಪ್ರಾಥ: ಕಾಲ ಗೋಪೂಜೆ ಕಲ್ಲೋಪ್ತ ನವಕಳಶಾರಾಧನೇ ಶ್ರೀ ದುರ್ಗಾ ಸಪ್ತಶತಿ ಪಾರಾಯಣ ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ಚಂಡಿಕಾ ಯಾಗವನ್ನು ನೆರವೇರಿಸಲು ಜಗನ್ಮಾತೆಯ ಪ್ರೇರಣೆಯಾಗಲಿದೆ.
ಪ್ರತಿ ದಿನ ಬೆಳಿಗ್ಗೆ 7:30 ರಿಂದ ಶ್ರೀ ಗುರು ಪ್ರಾರ್ಥನೆ, ಗಣಪತಿ ಪೂಜೆ, ಶುದ್ದಿ ಪುಣ್ಯಾಹ, ಸಂಕಲ್ಪ, ಶತಚಂಡೀ ಪಾರಾಯಣ, ಚಂಡೀಹವನ, ಸುಹಾಸಿನೀ ಕುಮಾರಿಕಾ ಪೂಜೆ, 11.30ಕ್ಕೆ ಪೂರ್ಣಾಹುತಿ ಅಷ್ಠಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.
ಪ್ರತಿ ದಿನ ಸಂಜೆ 5:30 ರಿಂದ ಶ್ರೀ ಗುರು ಗಣಪತಿ ಪೂಜೆ ಶುದ್ದಿ ಪುಣ್ಯಾಹ, ಮಹಾಸಂಕಲ್ಪ, ದ್ವಾರತೋರಣ ಧ್ವಜ ಕುಂಭಾರಾದನೆ, ಕಲ್ಲೋಕ್ತ ಕಳಷಾರಾಧನೆ, ಶ್ರೀ ದುರ್ಗಾಸಪ್ತಶತಿ ಪಾರಾಯಣ, ಸಾಮೂಹಿಕ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ, ದೀಪೋತ್ಸವ, ಅಷ್ಠಾವಧಾನ ಸೇವೆ, ರಾಜೋಪಚಾರ ಪೂಜೆ, ರಾಷ್ಟ್ರಾಶೀರ್ವಚನ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಾಡಲಾಗುತ್ತದೆ.
24-04-2026 ಶುಕ್ರವಾರ, ಅಷ್ಟಮಿ ಪುಷ್ಯ ನಕ್ಷತ್ರದಂದು ವಾರ್ಷಿಕೋತ್ಸವದ ದಿನ ವೈಶಾಖ ಶುದ್ಧ ಅಷ್ಟಮಿ ಪುಷ್ಯ ನಕ್ಷತ್ರದಂದು ವಿಶೇಶವಾಗಿ ಸುಪ್ರಭಾತ ಸೇವೆ ಪ್ರಾತಃ ಸೂಕ್ತ ಪರನ, ಫಲ ಪಂಚಾಮೃತ ಅಭಿಷೇಕ, ಷೋಡಶ ದ್ರವ್ಯಾಭಿಷೇಕ, ಸೂಕ್ತಾಭಿಷೇಕ, ವಿಶೇಷ ಅಲಂಕಾರ ರಾಜೋಪಚಾರ ಪೂಜೆ, ಅಷ್ಟಾವಧಾನ ಸೇವೆ ಮಹಾ ಶೋಢಶೋಪಚಾರ ಪೂಜೆ ಮಹಾಮಂಗಳಾರತಿ ನೆರವೇರಿಸಲಾಗುತ್ತದೆ.
ಶತಚಂಡೀ ದಿನ 26-04-2026 ಭಾನುವಾರ, ವೈಶಾಖಾ ಶುದ್ಧ ದಶಮಿಯಂದು ಶ್ರೀ ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಮಹಾಸಂಕಲ್ಪ ಶತಚಂಡೀಯಾಗ ಪ್ರಾರಂಭ ನವಾಕ್ಷರಿ ಮಂತ್ರ ಹೋಮ, ಕುಮಾರಿಕಾ ಸುಹಾಸಿನೀ ಪೂಜಾ, ಕೂಷ್ಮಾಂಡಬಲಿ ಮಹಾ ಪೂರ್ಣಾಹುತಿ, ರಾಷ್ಟ್ರಾಶೀರ್ವಚನ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಹಂಗರಹಳ್ಳಿ ಬಸವಣ್ಣ ನ ಸಾರಥ್ಯದಲ್ಲಿ ವಿದ್ಯಾಚೌಡೇಶ್ವರಿ ಅಮ್ಮನವರ ವೈಭವೋತ್ಸವಕ್ಕೆ ಬಂಧುಬಳದ ಸಪರಿವಾರ ಸಮೇತರಾಗಿ ಪಾಲ್ಗೊಂಡು ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಮಹಾ ಸಂಸ್ಥಾನ ಮಠದ ಶ್ರೀ ವಿದ್ಯಾ ನಂದಸ್ವಾಮೀಜಿ ತಿಳಿಸಿದ್ದಾರೆ.

