ನವದೆಹಲಿ: ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಫೆಮಿಯೊ ಕಿಶಿದಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗೋಲ್ಗೊಪ್ಪಾ ಸೇರಿದಂತೆ ಹಲವು ಭಾರತೀಯ ತಿನಿಸುಗಳನ್ನು ಸವಿದರು.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಜಪಾನ್ನ ನನ್ನ ಸ್ನೇಹಿತ ಕಿಶಿದಾ ಹಲವು ಭಾರತೀಯ ಖಾದ್ಯಗಳನ್ನು ಸವಿದರು ಎಂದು ಟ್ವೀಟ್ ಮಾಡಿದ್ದು, ನಾಲ್ಕು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಕಿಶಿದಾ ಅವರು ಭಾರತ ಭೇಟಿಗಾಗಿ ಸೋಮವಾರ ಭಾರತಕ್ಕೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕಿಶಿದಾ ಅವರು ನವದೆಹಲಿಯ ಹೈದ್ರಾಬಾದ್ ಹೌಸ್ನಲ್ಲಿ ವಿವಿಧ ಕ್ಷೇತ್ರಗಳ ಸಹಭಾಗಿತ್ವ ಕುರಿತು ಮಾತುಕತೆ ನಡೆಸಿದ್ದಾರೆ.