News Karnataka Kannada
Friday, May 10 2024
ವಿದೇಶ

ಪ್ರಧಾನಿ ಮೋದಿ ಮನ್‌ಕಿ ಬಾತ್‌ ವಿಶ್ವಸಂಸ್ಥೆಯಿಂದ ನೇರಪ್ರಸಾರ

PM Modi's Mann Ki Baat live streamed by UN
Photo Credit : News Kannada

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್​​ನ 100ನೇ ಸಂಚಿಕೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನೇರಪ್ರಸಾರವಾಗಲಿದೆ.

ಪ್ರಧಾನಿ ಮೋದಿಯವರ ಮನ್ ಕಿ ಬಾತ್​​ನ 100 ನೇ ಸಂಚಿಕೆಯು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿರುವ ಟ್ರಸ್ಟಿಶಿಪ್ ಕೌನ್ಸಿಲ್ ಚೇಂಬರ್‌ನಲ್ಲಿ ಏಪ್ರಿಲ್ 30 ರಂದು ನೇರಪ್ರಸಾರವಾಗಲಿರುವುದರಿಂದ ಐತಿಹಾಸಿಕ ಕ್ಷಣಕ್ಕೆ ಸಿದ್ಧರಾಗಿ ಎಂದು ಯುಎನ್‌ಗೆ ಭಾರತದ ಖಾಯಂ ಆಯೋಗ ಟ್ವೀಟ್‌ನಲ್ಲಿ ತಿಳಿಸಿದೆ.

ಪ್ರಧಾನಿ ಮೋದಿಯವರ ಮಾಸಿಕ ರೇಡಿಯೋ ಭಾಷಣದ 100 ನೇ ಸಂಚಿಕೆಯು ಏಪ್ರಿಲ್ 30 ರಂದು ಬೆಳಿಗ್ಗೆ 11 ಕ್ಕೆ ಪ್ರಸಾರವಾಗಲಿದೆ.

ಯುಎನ್ ಪ್ರಧಾನ ಕಛೇರಿಯಲ್ಲಿ ಭಾನುವಾರದ ಮುಂಜಾನೆ ಕಾರ್ಯಕ್ರಮದ ನೇರ ಪ್ರಸಾರವು ಐತಿಹಾಸಿಕ ಮತ್ತು ಅಭೂತಪೂರ್ವವಾಗಿರುತ್ತದೆ. ಇದು ಯುಎನ್‌ನ ಟ್ರಸ್ಟಿಶಿಪ್ ಕೌನ್ಸಿಲ್ ಚೇಂಬರ್‌ನಲ್ಲಿ ಪ್ರಸಾರವಾಗಲಿದೆ.

ಮನ್ ಕಿ ಬಾತ್ ಮಾಸಿಕ ಕಾರ್ಯಕ್ರಮವಾಗಿದ್ದು ಭಾರತದ ಅಭಿವೃದ್ಧಿಯ ಪ್ರಯಾಣದಲ್ಲಿ ಭಾಗವಹಿಸಲು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ ಎಂದು ಖಾಯಂ ಆಯೋಗ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು