Bengaluru 22°C
Ad

ಭಯೋತ್ಪಾದಕರಿಂದ ಪಾಕಿಸ್ತಾನದ ಶಾಲೆಗೆ ಬೆಂಕಿ : ಪಾರಾದ 1400 ವಿದ್ಯಾರ್ಥಿಗಳು

ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಕಟ್ಟಡದ ಮೇಲ್ಛಾವಣಿಯಲ್ಲಿದ್ದ ಪ್ಲೈವುಡ್, ಹಳೆಯ ಸೋಫಾ, ತ್ಯಾಜ್ಯ ವಸ್ತುಗಳು ಮತ್ತು ಇತರ ಪೀಠೋಪಕರಣಗಳ ತುಣುಕುಗಳಿಗೆ ಕೆಲವು ಬೆಂಕಿ ಕಿಡಿಗಳು ತಾಗಿ ಹೊತ್ತಿ ಉರಿದಿವೆ.

ಪೇಶಾವರ್‌: ಪರ್ವತ ಪ್ರದೇಶಗಳಿಂದ ಆವೃತವಾಗಿರುವ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಹರಿಪುರ ಜಿಲ್ಲೆಯ ಸಿರಿಕೋಟ್‌ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸೋಮವಾರ ಭಾರೀ ಅಗ್ನಿ ಅವಗಢ ಸಂಭವಿಸಿದ್ದು, ಅದೃಷ್ಟವಶಾತ್‌ ಶಾಲೆಯಲ್ಲಿದ್ದ ಎಲ್ಲ 1,400 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ.

ಬೆಂಕಿ ತಗುಲಿರುವ ಕುರಿತು ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಮರದಿಂದಲೇ ಶಾಲೆ ನಿರ್ಮಿಸಿದ್ದ ಕಾರಣ ಅದು ಪೂರ್ಣ ಸುಟ್ಟು ಭಸ್ಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿರಿಕೋಟ್‌ ಬಾಲಕಿಯರ ಶಾಲೆಯಲ್ಲಿ ಅಗ್ನಿದುರಂತಕ್ಕೆ ಉಗ್ರರೇ ಕಾರಣ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೊದಲಿಗೆ ಉಗ್ರರು ಶಾಲೆಯ ಕಾವಲುಗಾರನನ್ನು ಹೊಡೆದುರುಳಿಸಿ ಬಳಿಕ ಎರಡು ಕೊಠಡಿಗಳಿಗೆ ನುಗ್ಗಿ ಶಾರ್ಟ್‌ ಸರ್ಕೀಟ್‌ ಮಾಡಿರುವುದಾಗಿ ತಿಳಿಸಿವೆ.

Ad
Ad
Nk Channel Final 21 09 2023
Ad