ದುಬೈ: ಕನ್ನಡಿಗರ ಹೆಮ್ಮೆ, ಕರ್ನಾಟಕದ ಅಸ್ಮಿತೆ ಕೆಎಂಎಫ್ ‘ನಂದಿನಿ ಮಳಿಗೆ’ ದುಬೈನಲ್ಲಿ ಪ್ರಾರಂಭಗೊಂಡಿದೆ. ಈ ಮೂಲಕ ಕನ್ನಡದ ಕಂಪು ವಿದೇಶದಲ್ಲೂ ಹರಡಿದಂತಾಗಿದೆ.
ಪಸನ್ಸ್ ಸೂಪರ್ ಮಾರ್ಕೆಟ್ ದುಬೈನಲ್ಲಿ ನಂದಿನಿ ಕೆಫೆ ಮೂ ನೂತನ ಮಳಿಗೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ರಾಯಭಾರಿಗಳೊಂದಿಗೆ ಹಾಗೂ ದುಬೈನಲ್ಲಿ ವಾಸವಾಗಿರುವ ಭಾರತಿಯರೊಂದಿಗೆ ಉದ್ಘಾಟಿಸಲಾಯಿತು. ಈ ಮಳಿಗೆಗೆ ಉತ್ತಮ ಸ್ಪಂದನೆ ಸಿಕ್ಕಿದೆ.
ಕೇವಲ ಭಾರತೀಯರಷ್ಟೆ ಅಲ್ಲದೇ ದುಬೈನಲ್ಲಿ ನೆಲೆಸಿರುವ ಬೇರೆ ಬೇರೆ ದೇಶದ ಜನರು ಕೂಡಾ ಕರ್ನಾಟಕದ ನಂದಿನಿ ಉತ್ಪನ್ನದ ಸವಿಯನ್ನ ಸವಿಯುತ್ತಿದ್ದಾರೆ. ಭಾರತದಲ್ಲೇ ಎರಡನೇ ಅತೀ ಹೆಚ್ಚು ಹಾಲು ಉತ್ಪನ್ನ ತಯಾರಿಸುವ ಸಂಸ್ಥೆಯಾಗಿರುವ ನಂದಿನಿ ದುಬೈನಲ್ಲೂ ಭಾರೀ ಮೆಚ್ಚುಗೆ ಪಡೆದಿದೆ.
ಪಸನ್ಸ್ ಸೂಪರ್ ಮಾರ್ಕೆಟ್ ದುಬೈನಲ್ಲಿ ನಂದಿನಿ ಕೆಫೆ ಮೂ ನೂತನ ಮಳಿಗೆಯನ್ನು ಇಂದು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ರಾಯಭಾರಿಗಳೊಂದಿಗೆ ಹಾಗೂ ದುಬೈನಲ್ಲಿ ವಾಸವಾಗಿರುವ ಭಾರತಿಯರೊಂದಿಗೆ ಉದ್ಘಾಟಿಸಲಾಯಿತು.#kmf#dubai#uae#nandini pic.twitter.com/CwEKKgUxLq
— KMF Nandini (@kmfnandinimilk) September 9, 2023