ಲಾಹೋರ್: ಕಳೆದ ಮೂರು ವಾರಗಳಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನ್ಯುಮೋನಿಯಾದಿಂದ 200ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ತೀವ್ರ ಚಳಿಯ ವಾತಾವರಣದಿಂದಾಗಿ ಈ ಸಾವು ಸಂಭವಿಸಿವೆ ಎಂದು ಸರ್ಕಾರ ಶುಕ್ರವಾರ ಮಾಹಿತಿ ನೀಡಿದೆ.
ಮೃತಪಟ್ಟ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಹಾಗೂ ನ್ಯುಮೋನಿಯಾ ಲಸಿಕೆ ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ.
ಹವಾಮಾನ ವೈಪರೀತ್ಯದ ಕಾರಣ ಈ ಪ್ರಾಂತ್ಯದಲ್ಲಿ ಜನವರಿ 31ರವರೆಗೆ ಬೆಳಿಗ್ಗೆ ತರಗತಿ ನಡೆಸದಂತೆ ಸರ್ಕಾರ ಈಗಾಗಲೇ ಶಾಲೆಗಳಿಗೆ ಸೂಚಿಸಿದೆ. ಪಂಜಾಬ್ನ ಪ್ರಾಂತೀಯ ರಾಜಧಾನಿ ಲಾಹೋರ್ನಲ್ಲಿ 47 ಮಕ್ಕಳು ಮೃತಪಟ್ಟಿವೆ.ಮಕ್ಕಳಲ್ಲಿ ನ್ಯುಮೋನಿಯಾ ಪ್ರಕರಣಗಳ ಹೆಚ್ಚಳದ ಬಗ್ಗೆ ಅಲ್ಲಿನ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಕ್ಕಳಿಗೆ ನ್ಯುಮೋನಿಯಾ ಬಾರದಂತೆ ತಡೆಯಲು ಮಾಸ್ಕ್ ಧರಿಸಿ, ಸ್ವಚ್ಛವಾಗಿ ಕೈತೊಳೆದುಕೊಳ್ಳುವಂತೆ ಹಾಗೂ ಬೆಚ್ಚಗಿನ ಬಟ್ಟೆ ಧರಿಸುವಂತೆ ಸೂಚಿಸಿದೆ.