News Karnataka Kannada
Sunday, April 28 2024
ವಿದೇಶ

ಸ್ಪೇನ್‌: ವಿಶ್ವಕ್ಕೆ ಮಾರಕವಾಗಿರುವ ಮಂಕಿಪಾಕ್ಸ್ ಗೆ ಎರಡು ಬಲಿ!

Bengaluru: Border areas on high alert in the wake of monkey pox
Photo Credit : Twitter

ಸ್ಪೇನ್‌: ವಿಶ್ವಕ್ಕೆ ಮಾರಕವಾಗಿರುವ ಮಂಕಿಪಾಕ್ಸ್ ಎರಡನೇ ಸಾವು ಸಂಭವಿಸಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಇದರ ನಡುವೆ ಸ್ಪೇನ್‌ನಲ್ಲಿ ಮಂಕಿಪಾಕ್ಸ್ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದೆ.

ಕಳೆದ ಎರಡು ದಿನದಲ್ಲಿ ಸ್ಪೇನ್‌ನಲ್ಲಿ ಮಂಕಿಪಾಕ್ಸ್‌ಗೆ ಎರಡು ಬಲಿಯಾಗಿದೆ. ಶುಕ್ರವಾರ ಮಂಕಿಪಾಕ್ಸ್‌ನಿಂದ ಸ್ಪೇನ್‌ನಲ್ಲಿ ಮೊದಲ ಬಲಿಯಾಗಿದ್ದರೆ, ಶನಿವಾರ ಎರಡನೇ ಬಲಿಯಾಗಿದೆ. ಸದ್ಯ ಸ್ಪೇನ್‌ನಲ್ಲಿ 4,298 ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ.

ಇದೀಗ 80 ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. 21,00 ಮಂಕಿಪಾಕ್ಸ್ ಪ್ರಕರಣ ವಿಶ್ವದಲ್ಲಿ ಪತ್ತೆಯಾಗಿದೆ. ಅಮೆರಿಕದಲ್ಲೂ ಮಂಕಿಪಾಕ್ಸ್ ಪ್ರಕರಣ ವೇಗವಾಗಿ ಹರಡುತ್ತಿದೆ. ಇತ್ತ ಸ್ಪೇನ್‌ಲ್ಲಿ ಎರಡು ಸಾವು ತೀವ್ರ ಆತಂಕ ಹೆಚ್ಚಿಸಿದೆ.

ಭಾರತದ ಮೊದಲ ಮಂಕಿಪಾಕ್ಸ್‌ ಸೋಂಕಿತನಾದ ಕೇರಳದ 35 ವರ್ಷದ ವ್ಯಕ್ತಿಯು ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು