ಇಸ್ಲಾಮಾಬಾದ್: ಭಾರತದ ವಿರುದ್ಧ ಉಗ್ರಗಾಮಿ ಪಿತೂರಿ ನಡೆಸಿ ವಿದೇಶಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಿರುವ ಹಲವು ಉಗ್ರರು ಈಗಾಗಲೇ ಅಪರಿಚಿತರ ಗುಂಡಿಗೆ ಬಲಿಯಾದ ಘಟನೆ ನಡೆದಿದೆ.
ಅದೇ ರೀತಿ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಉಗ್ರ ಕೈಸರ್ ಫಾರೂಕ್ ಪಾಕಿಸ್ತಾನದ ಕರಾಚಿಯಲ್ಲಿ ಅಪರಿಚಿತ ವ್ಯಕ್ತಿಗಳ ಗುಂಡೇಟಿಗೆ ಬಲಿಯಾಗಿದ್ದಾನೆ.
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್ಇಟಿ)ದ ಮೋಸ್ಟ್ ವಾಂಟೆಡ್ ನಾಯಕರಲ್ಲಿ ಒಬ್ಬನಾಗಿದ್ದ ಕೈಸರ್ ಫಾರೂಕ್, 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ನ ನಿಕಟ ಸಹವರ್ತಿಯಾಗಿದ್ದ. ಹಲವು ಭಾರತ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ.
ಪೊಲೀಸ್ ಮೂಲಗಳ ಪ್ರಕಾರ, ಕರಾಚಿಯ ಬೀದಿಯಲ್ಲಿ ಇತರೆ ವ್ಯಕ್ತಿಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಉಗ್ರ ಗುಂಡೇಟಿಗೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮೃತಪಟ್ಟಿದ್ದಾನೆ.
⚡️⚡️Another Most Wanted LeT terrorist Qaiser Farooq gunned down by "unknown men" in Karachi, Pakistan.
Mufti Qaiser Farooq was one of the founding members of Lashkar-e-Tayyeba and a close associate of Global Terrorist Hafiz Saeed. pic.twitter.com/c4karhjsW5
— Megh Updates 🚨™ (@MeghUpdates) September 30, 2023