News Karnataka Kannada
Saturday, May 04 2024
ವಿದೇಶ

ಮೂವರು ಹಮಾಸ್‌ ಕಮಾಂಡರ್‌ ಗಳನ್ನು ಹೊಡೆದುರುಳಿಸಿದ ಇಸ್ರೇಲ್‌

Israel shoots down three Hamas commanders
Photo Credit : News Kannada

ಟೆಲ್‌ ಅವಿವ್‌: ಇಸ್ರೇಲ್‌ ಹಮಾಸ್‌ ಸಂಘರ್ಷ ಆರಂಭವಾಗಿ ತಿಂಗಳು ಕಳೆದಿದೆ. ಸಹಸ್ರಾರು ಮಂದಿ ಈ ಯುದ್ಧದಲ್ಲಿ ಮೃತಪಟ್ಟಿದ್ದಾರೆ.

ಇದೀಗ ಗಾಜಾಪಟ್ಟಿಯಲ್ಲಿ ಕಳೆದ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಹಮಾಸ್ ಕಮಾಂಡರ್‌ಗಳು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಇಂದು ಘೋಷಿಸಿದೆ.

ಯುದ್ಧಸಾಮಗ್ರಿಗಳನ್ನು ಅಡಗಿಸಿರುವ ಗೋದಾಮಿನೊಳಗೆ ಸೇನೆ ಪ್ರವೇಶಿಸಿದಾಗ ಭಯೋತ್ಪಾದಕರು ಅಡಗಿರುವುದು ತಿಳಿದುಬಂತು. ಈ ವೇಳೆ ಸೈನಿಕರು ವೈಮಾನಿಕ ದಾಳಿಗೆ ಕರೆ ನೀಡಿದರು. ಅಂತೆ ವೈಮಾನಿಕ ದಾಳಿಯಲ್ಲಿ ಭಯೋತ್ಪಾದಕರನ್ನು ಹತ್ಯೆ ಮಾಡಿ ಕಟ್ಟಡ ಮತ್ತು ಅದರ ಶಸ್ತ್ರಾಸ್ತ್ರಗಳನ್ನು ನಾಶಪಡಿಸಲಾಗಿದೆ ಎಂದು ಐಡಿಎಫ್ ತಿಳಿಸಿದ್ದಾರೆ.

ಕನಿಷ್ಠ ಮೂವರು ಒತ್ತೆಯಾಳುಗಳನ್ನು ಶಿಫಾ ಆಸ್ಪತ್ರೆಗೆ ಕರೆತರುವ ಸಿಸಿಟಿವಿ ದೃಶ್ಯಾವಳಿಗಳನ್ನು ಐಡಿಎಫ್ ಪ್ರಸ್ತುತಪಡಿಸಿದ್ದು ಆಸ್ಪತ್ರೆಯ ಅಡಿಯಲ್ಲಿ ಹಮಾಸ್ ಭಯೋತ್ಪಾದಕ ಮೂಲಸೌಕರ್ಯವನ್ನು ನಿರ್ಮಿಸಿಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಗುಪ್ತಚರ ದೃಢಪಡಿಸಿದೆ ಎಂದು ಐಡಿಎಫ್ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು