ಹಮಾಸ್ ಉಗ್ರನೊಬ್ಬ ಇಸ್ರೇಲ್ ಯುವತಿಯನ್ನು ಅಟ್ಟಾಡಿಸಿಕೊಂಡು ಹೋಗಿ ಗುಂಡಿಕ್ಕಿ ಕೊಂದಿರುವ ವಿಡಿಯೋವೊಂದನ್ನು ಇಸ್ರೇಲ್ ರಿಲೀಸ್ ಮಾಡಿದೆ. ದೃಶ್ಯದಲ್ಲಿ ಹಮಾಸ್ ಉಗ್ರನೊಬ್ಬ ಇಸ್ರೇಲ್ ಯುವತಿಯನ್ನು ಅಟ್ಟಾಡಿಸಿಕೊಂಡು ಹೋಗಿ ಗುಂಡಿಕ್ಕಿ ಕೊಂದಿರುವುದು ಸೆರೆಯಾಗಿದೆ.
ಅ.7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡಿದ್ದಾರೆ. ಇದರ ಜತೆಗೆ ಇಸ್ರೇಲ್ನ ಹೊರಂಗಣದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಮೇಲೆಯು ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಉಗ್ರನೊಬ್ಬ ಯುವತಿಯೊಬ್ಬಳನ್ನು ಅಟ್ಟಾಡಿಸಿಕೊಂಡು ಹೋಗಿ, ಗುಂಡಿಕ್ಕಿ ಕೊಂದಿದ್ದಾನೆ.
ಯವತಿ ಅಂಗಲಾಚಿದರು ಬಿಡದೆ ಶೂಟ್ ಮಾಡಿದ್ದಾನೆ. ಇದೀಗ ಈ ವಿಡಿಯೋವನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಬಳಿಕ ಈ ವಿಡಿಯೋವನ್ನು ಇಸ್ರೇಲ್ ವಿದೇಶಾಂಗ ಸಚಿವಾಲಯ ಹಂಚಿಕೊಂಡಿದ್ದಾರೆ.