ಕಠ್ಮಂಡು: ನೇಪಾಳದಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ವೊಂದು ಮಂಗಳವಾರ ನಾಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಸೋಲುಖುಂಬು ಜಿಲ್ಲೆಯಿಂದ ಕಠ್ಮಂಡುವಿಗೆ ತೆರಳುತ್ತಿತ್ತು. ಹೆಲಿಕಾಪ್ಟರ್ನಲ್ಲಿ ಪೈಲಟ್ ಹೊರತುಪಡಿಸಿ ಐವರು ವಿದೇಶಿ ಪ್ರಯಾಣಿಕರಿದ್ದರು ಎಂದು ಏರ್ನ ಮ್ಯಾನೇಜರ್ ರಾಜು ನ್ಯೂಪಾನೆ ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ 10.12ಕ್ಕೆ ಹೆಲಿಕಾಪ್ಟರ್ ರಾಡಾರ್ ಸಂಪರ್ಕ ಕಡಿದುಕೊಂಡಿದೆ. ಹೆಲಿಕಾಪ್ಟರ್ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಬಳಿಯ ಲುಕ್ಲಾಗೆ ತೆರಳುತ್ತಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಲ್ಯಾಂಡ್ ಆಗಲು ಸಾಧ್ಯವಾಗಲಿಲ್ಲ. ನಂತರ ಸೋಲುಖುಂಬು ಸುರ್ಕೆಯಲ್ಲಿ ಇಳಿದು ಕಠ್ಮಂಡುವಿಗೆ ತೆರಳುತ್ತಿತ್ತು. ಈ ವೇಳೆ ಹೆಲಿಕಾಪ್ಟರ್ ನಾಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.