News Karnataka Kannada
Friday, May 10 2024
ದೇಶ

ಮೆಕ್ಸಿಕನ್ ಬ್ಯೂಟಿಯ ಮದುವೆಯಾದ ಜೊಮಾಟೊ ಸಿಇಒ

Zomat
Photo Credit : NewsKarnataka

ದೆಹಲಿ: ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಎರಡನೇ ಮದುವೆ ಆಗಿದ್ದಾರೆ. ಅವರು ಮೆಕ್ಸಿಕನ್ ಮಾಡೆಲ್ ಗ್ರೇಸಿಯಾ ಮುನೋಜ್ ರನ್ನು ಮದುವೆಯಾಗಿದ್ದಾರೆ. ಮದುವೆ ಬೆನ್ನಲ್ಲೇ ಇವರಿಬ್ಬರು ಹನಿಮೂನ್‌ ಮುಗಿಸಿ ವಾಸಪ್ ಆಗಿದ್ದಾರೆ ಎಂದು ಸುದ್ದಿಯಾಗಿದೆ.

ಅಂದ್ಹಾಗೆ ಇವರಿಬ್ಬರ ಮದುವೆ ಕಳೆದ ಫೆಬ್ರವರಿಯಲ್ಲೇ ಆಗಿದೆ. ಗೋಯಲ್​ಗೆ ಇದು ಎರಡನೇ ಮದುವೆ. ದೆಹಲಿ ಮೂಲದ ಬಾಲ್ಯ ಸ್ನೇಹಿತೆ ಕಾಂಚನ್ ಜೋಶಿ ಜೊತೆ ಮೊದಲ ವಿವಾಹ ನಡೆದಿತ್ತು.

ಜನವರಿಯಲ್ಲಿ ಮುನೋಜ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ದೆಹಲಿಯಲ್ಲಿ ತನ್ನ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. 41ನೇ ವಯಸ್ಸಿನಲ್ಲಿ ದೀಪಿಂದರ್ ಗೋಯಲ್ ಅವರು ಜೊಮೆಟೊದ ಸಂಸ್ಥಾಪಕ ಮತ್ತು ಸಿಇಒ ಆಗಿ ವ್ಯಾಪಾರ ಜಗತ್ತಿನಲ್ಲಿ ಗಮನಾರ್ಹ ಛಾಪು ಮೂಡಿಸಿದ್ದಾರೆ.

ಗೋಯಲ್ ಅವರ ಸ್ವಂತ ಅಪಾರ್ಟ್‌ಮೆಂಟ್‌ನಿಂದ 2008 ರಲ್ಲಿ ಸಣ್ಣದಾಗಿ ಹುಟ್ಟಿಕೊಂಡ ಜೊಮೆಟೊ ಆಹಾರ ವಿತರಣಾ ಉದ್ಯಮದಲ್ಲಿ ಈಗ ಬೃಹತ್‌ ಮಟ್ಟದಲ್ಲಿ ಬೆಳೆದಿದೆ. ಇದು ಭಾರತದಾದ್ಯಂತ 1,000 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಹಸಿರು ಸಮವಸ್ತ್ರವನ್ನು ಧರಿಸಿರುವ ಪ್ರತ್ಯೇಕವಾಗಿ ಸಸ್ಯಾಹಾರಿ ಊಟವನ್ನು ವಿತರಿಸುವ ವಿತರಣಾ ಕಾರ್ಯನಿರ್ವಾಹಕರ ‘ಶುದ್ಧ ವೆಜ್’ ಫ್ಲೀಟ್‌ನ ಯೋಜನೆಗಳನ್ನು ಘೋಷಿಸಿದಾಗ ವಿವಾದ ಕೂಡಾ ಉಂಟಾಗಿತ್ತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು