News Karnataka Kannada
Saturday, April 27 2024
ಅಂಕಣ

ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’

Sneha
Photo Credit : Wikipedia

ಎಸ್. ಎಲ್. ಭೈರಪ್ಪನವರ ಗೃಹಭಂಗವು ಪ್ರಸಿದ್ಧ ಮತ್ತು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾದ ಕಾದಂಬರಿ. ಈ  ಕಾದಂಬರಿಯು ತಿಪಟೂರು, ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಂಡ ಭಾಗದ ಪ್ರಾದೇಶಿಕ ಹಿನ್ನೆಲೆ ಹೊಂದಿದೆ. ‘ಗೃಹಭಂಗ’ವು ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ.

ಇದೊಂದು ಮನೆತನಕ್ಕೆ ಸಂಬಂಧಿಸಿದ ನಂಜಮ್ಮ ಎನ್ನುವ ಹೆಣ್ಣುಮಗಳ ಕಥೆಯಾದರೂ ಆಕೆಯ ಜೊತೆಜೊತೆಗೆ ಸಮಾಜದ ಎಲ್ಲ ಸ್ಥರದವರೊಂದಿಗೂ ಹೆಣೆದುಕೊಂಡಿರುವ ಕಥೆ. ಎಲ್ಲಿ ಬೇಕಾದರೂ, ಯಾರ ಮನೆಯಲ್ಲಿ ಬೇಕಾದರೂ, ಯಾವ ಕಾಲಮಾನದಲ್ಲಿಯಾದರೂ ನಡೆಯಬಹುದಾದ ಕಥೆ. ಹಾಗಾಗಿ ಕಾದಂಬರಿಗೆ ಸಾರ್ವತ್ರಿಕ, ಸಕಾಲಿಕ ಮಾನ್ಯತೆ ದೊರೆತಿದೆ ಎಂದರೇ ಅದರಲ್ಲಿ ಪ್ರಸ್ತಾವಿಸಿರುವ ಸಂಗತಿಗಳು, ಘಟನೆಗಳು, ವ್ಯಕ್ತಿಗಳು, ಸಮುದಾಯಕ್ಕಿರುವ ಪ್ರಸ್ತುತತೆಯೇ ಅದಕ್ಕೆ ಕಾರಣ.

ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ನೈತಿಕತೆ, ಹಕ್ಕು, ಬಾಧ್ಯತೆ, ಆಕೆಯ ನೋವು, ತುಮುಲ, ತಳಮಳ, ಸ್ಥಾನಮಾನ ಕುರಿತ ಅನೇಕ ಕಾದಂಬರಿಗಳು ಈಗಾಗಲೇ ಎಲ್ಲ ಭಾಷೆಗಳಲ್ಲಿ ಬಂದಿದೆ.

ಹೆಣ್ಣಿಗಿರುವ ಕಷ್ಟಗಳೇನು ಎಂದು ಚರ್ಚಿಸುತ್ತಲೇ, ಅದರ ಸುತ್ತ ಬರೆಯುತ್ತಲೇ ದಿನಬೆಳಗಾಗುವುದರೊಳಗೆ ಹಲವರು ಪ್ರಸಿದ್ಧಿ ಪಡೆದುದೂ ವಾಸ್ತವವೇ ಸರಿ. ಆ ನಿಟ್ಟಿನಲ್ಲಿ ನೋಡಿದಾಗ ಇದೂ ಕೂಡ ಅದೇ ಸಾಲಿನಲ್ಲಿ ನಿಲ್ಲಬಲ್ಲ ಒಂದು ಸುಧೀರ್ಘ ಸಾಮಾಜಿಕ ಮತ್ತು ಕೌಟುಂಬಿಕ ಕಾದಂಬರಿ ಎಂದು ಹೇಳಬಹುದಾದರೂ ಅದರಲ್ಲಿನ ವೈಶಿಷ್ಟ್ಯತೆಗಳು ಇದನ್ನೊಂದು ಸಾಮಾನ್ಯ ಕಾದಂಬರಿ ಎಂದು ವರ್ಗೀಕರಣ ಮಾಡಲು ಬಿಡುವುದಿಲ್ಲ. ಕೇವಲ ಸ್ತ್ರೀ ಸ್ವಾತಂತ್ರ್ಯ ಮತ್ತು ಆಕೆಯ ಸುತ್ತ ಹೆಪ್ಪುಗಟ್ಟಿ ನಿಂತಿರುವ ಸಮಸ್ಯೆಗಳ ಕುರಿತಷ್ಟೇ ಕಾದಂಬರಿ ತನ್ನ ನಿಲುವನ್ನು ಬಿಂಬಿಸುವುದಿಲ್ಲ. ಸಮಾನತೆ, ಅಸಮಾನತೆ ಕುರಿತ ವ್ಯಾಖ್ಯಾನವಷ್ಟೇ ಕಥೆಯ ಕೇಂದ್ರಬಿಂದುವಲ್ಲ. ಅಷ್ಟೇ ಆಗಿದಿದ್ದರೆ ಇಷ್ಟೆಲ್ಲಾ ಹೇಳುವ ಪ್ರಮೇಯವೂ ಇರುತ್ತಿರಲಿಲ್ಲ. ಒಂದು ಕಾಲದ ಒಟ್ಟೂ ಸಮುದಾಯದ ನಿರ್ದಿಷ್ಟ ಜೀವನ ಮಾಪನವನ್ನು ಸಮಗ್ರವಾಗಿ ಬಿಂಬಿಸುವ ಕಾದಂಬರಿ ಇದಾಗಿದೆ.

ಸಂಬಂಧಗಳ ಮೌಲ್ಯ ಅಪಮೌಲ್ಯವಾಗುತ್ತಿರುವ ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಾದಂಬರಿ ಹೇಗೆ ಸಂಬಂಧಗಳ ಅವಶ್ಯಕತೆಯನ್ನು, ಅದರ ಮಹತ್ವವನ್ನು ನಿರ್ದಿಷ್ಟವಾಗಿ ಪ್ರತಿಪಾದಿಸುತ್ತವೆ ಎಂದು ಸ್ಪಷ್ಟವಾಗಿ ಇಲ್ಲಿ ಹೇಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4383

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು