News Karnataka Kannada
Friday, May 03 2024
ಉತ್ತರಖಂಡ

ಉತ್ತರಕಾಶಿಯಲ್ಲಿ 4.1 ತೀವ್ರತೆಯ ಭೂಕಂಪನ

Earthquack.
Photo Credit :

ಉತ್ತರ ಕಾಶಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಶನಿವಾರ ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಉತ್ತರಕಾಶಿಯಿಂದ ಪೂರ್ವಕ್ಕೆ 39 ಕಿಮೀ ದೂರದಲ್ಲಿ ತೆಹ್ರಿ ಗರ್ವಾಲ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 5.03ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಅಕ್ಷಾಂಶ 30.72 ಮತ್ತು ರೇಖಾಂಶ 78.85 ರಲ್ಲಿ 28 ಕಿಮೀ ಆಳದಲ್ಲಿದೆ.

ಲಘು ಭೂಕಂಪದಲ್ಲಿ ಯಾವುದೇ ರೀತಿ ಸಾವು-ನೋವು ಮತ್ತು ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.

ಪರಿಷ್ಕೃತ ಮರ್ಕಲ್ಲಿ ಇಂಟೆನ್ಸಿಟಿ ಸ್ಕೇಲ್ ಎಲ್ಲರಿಗೂ ಅನಿಸುವಷ್ಟು ಪ್ರಬಲವಾಗಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, 4.1-ತೀವ್ರತೆಯ ಭೂಕಂಪನದಿಂದ ಪ್ಲ್ಯಾಸ್ಟರ್ ಮತ್ತು ಗಾಜಿನ ವಸ್ತುಗಳು ಬಿದ್ದು ಒಡೆಯುವಷ್ಟು ತೀವ್ರತೆಯನ್ನು ಹೊಂದಿರುತ್ತವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು