ಹಾವೇರಿ : ಹಾವೇರಿಯ ದೇವಗಿರಿ ಗ್ರಾಮದ ಸಮೀಪ ಸೇತುವೆ ಮೇಲಿಂದ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 15 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಹಾವೇರಿಯ ದೇವಗಿರಿ ಸಮೀಪ ಖಾಸಗಿ ಬಸ್ ಸೇತುವೆ ಮೇಲಿಂದ ಸರ್ವಿಸ್ ರಸ್ತೆಗೆಉರುಳಿ ಬಿದ್ದ ಪರಿಣಾಮ ಬಸ್ ನ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ15 ಕ್ಕೂಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.