News Karnataka Kannada
Monday, May 13 2024
ಉತ್ತರ ಪ್ರದೇಶ

ವಿಡಿಯೋ: ‘ಟೋಲ್ ಸಿಬ್ಬಂದಿ’ ಮೇಲೆ ಕಾರು ಹರಿಸಿ ಚಾಲಕನ ಅಟ್ಟಹಾಸ

Toll Plaza employee
Photo Credit : News Kannada

ಉತ್ತರಪ್ರದೇಶ: ಟೋಲ್ ಕಟ್ಟುವಂತೆ ಹೇಳಿದರೂ, ಕಟ್ಟದೇ ಅಲ್ಲಿಂದ ನುಗ್ಗಿಸಿಕೊಂಡು ಚಾಲಕನೊಬ್ಬ ಉತ್ತರಪ್ರದೇಶದ ಹಾಪುರ್ ನಲ್ಲಿ ಹೋಗಿದ್ದಾನೆ. ಇದನ್ನು ಕಂಡ ಸಿಬ್ಬಂದಿ ಕಾರು ತಡೆದಿದ್ದಕ್ಕೆ, ಸಿಟ್ಟುಕೊಂಡ ಚಾಲಕ, ಯೂಟರ್ನ್ ತಿರುಗಿಸಿಕೊಂಡು ಬಂದು ಟೋಲ್ ಸಿಬ್ಬಂದಿಯ ಮೇಲೆ ಕಾರು ಹರಿಸಿ ಅಟ್ಟಹಾಸ ಮೆರೆದಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಹಾಪುರ್ ನಲ್ಲಿನ ಟೋಲ್ ಬಳಿಯಲ್ಲಿ ಭಯಾನಕ ಕೃತ್ಯವೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಟೋಲ್ ಬ್ಯಾರಿಯರ್ ಗೆ ಗುದ್ದಿ ಟೋಲ್ ಕಟ್ಟದಂತೆ ಕಾರು ಚಾಲಕನೊಬ್ಬ ತೆರಳಿದ್ದಾನೆ. ಇದನ್ನು ಕಂಡಂತ ಟೋಲ್ ಸಿಬ್ಬಂದಿ ಕೆಲ ದೂರದವರೆಗೆ ಕಾರಿನ ಮಿರರ್ ಹಿಡಿದು ತಡೆಯೋ ಪ್ರಯತ್ನ ನಡೆಸಿದ್ದಾನೆ. ಆದ್ರೇ ಅದು ಸಾಧ್ಯವಾಗಿಲ್ಲ.

ಇದೀಗ ಉತ್ತರ ಪ್ರದೇಶದ ಹಾಪುರ್ ನಲ್ಲಿ ಕಾರು ಚಾಲನ ಕ್ರೌರ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚಾಲಕನ ಕೃತ್ಯಕ್ಕೆ ಸಾರ್ವಜನಿಕರು ಕಿಡಿಕಾರಿದ್ದಾರೆ. ಆತನ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೂ ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು