ಬರೇಲಿ, ಆ.28: ಟ್ರ್ಯಾಕ್ಟರ್ ಟ್ರಾಲಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿರುವ ಘಟನೆ ಬರೇಲಿಯ ಬಹೇದಿ ಪೊಲೀಸ್ ವೃತ್ತದ ಬಳಿ ಭಾನುವಾರ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಮತ್ತು ಗಾಯಾಳುಗಳೆಲ್ಲರೂ ಉತ್ತರಾಖಂಡದ ಸಿತಾರ್ಗಂಜ್ನಿಂದ ಬರೇಲಿಯ ಗುರುದ್ವಾರಕ್ಕೆ ಬರುತ್ತಿದ್ದರು.
ಟ್ಯಾಂಕರ್ ನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗಿದೆ.