News Karnataka Kannada
Monday, April 29 2024
ಉತ್ತರ ಪ್ರದೇಶ

ಪಬ್ಜಿ ಕಹಾನಿ: ಭಾರತದ ಪೌರತ್ವ ನೀಡುವಂತೆ ರಾಷ್ಟ್ರಪತಿಗೆ ಪಾಕ್ ಸೀಮಾ ಮನವಿ

seema haider
Photo Credit : News Kannada

ನೋಯ್ಡಾ: ಪಾಕಿಸ್ತಾನದ ಸೀಮಾ ಹೈದರ್ ಹಾಗೂ ಪಾಕಿಸ್ತಾನದ ಸಚಿವ ಮೀನಾ ಅವರ ಪ್ರೇಮಕಥೆ ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಯಲ್ಲಿದೆ. ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಮತ್ತು ಸಚಿನ್ ಅವರನ್ನು ಯುಪಿ ಎಸ್‌ಟಿಎಫ್ ಇತ್ತೀಚೆಗೆ ವಿಚಾರಣೆಗೆ ಒಳಪಡಿಸಿತು, ನಂತರ ಅವರಿಬ್ಬರೂ ಅಸ್ವಸ್ಥರಾಗಿದ್ದರು ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಶುಕ್ರವಾರ, ಸೀಮಾ ಹೈದರ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದರು ಮತ್ತು ನೋಯ್ಡಾದಲ್ಲಿ ತನ್ನ 4 ಮಕ್ಕಳು ಮತ್ತು ಸಚಿನ್ ಮೀನಾ ಅವರೊಂದಿಗೆ ವಾಸಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.

ನೋಯ್ಡಾದಲ್ಲಿ ವಾಸಿಸುತ್ತಿರುವ ಸಚಿನ್ ಮೀನಾ (22) ಎಂಬಾತನನ್ನು ತಾನು ಪ್ರೀತಿಸುತ್ತಿದ್ದು, ತನ್ನ ನಾಲ್ವರು ಮಕ್ಕಳೊಂದಿಗೆ ಆತನೊಂದಿಗೆ ಇರಲು ಭಾರತಕ್ಕೆ ಬಂದಿದ್ದೇನೆ ಎಂದು ಹೈದರ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ನೇಪಾಳದ ಕಠ್ಮಂಡುವಿನ ಪಶುಪತಿನಾಥ ದೇವಾಲಯದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮೀನಾ ಅವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿರುವುದಾಗಿ ಸೀಮಾ ಹೇಳಿಕೊಂಡಿದ್ದಾರೆ. ಪಬ್ಜಿ ಆಟವು ಸೀಮಾ ಹಾಗೂ ಸಚಿನ್ ನಡುವೆ ಪ್ರೀತಿ ಹುಟ್ಟುವಂತೆ ಮಾಡಿತ್ತು, ಸಚಿನ್​ಗಾಗಿ ಸೀಮಾ ಪಾಕಿಸ್ತಾನವನ್ನು ಬಿಟ್ಟು ಬಂದಿದ್ದಾರೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು