News Karnataka Kannada
Friday, May 10 2024
ಬೆಳಗಾವಿ

ಚಂದ್ರಯಾನ-3ಕ್ಕೆ ಬೆಳಗಾವಿಯ ಯುವ ವಿಜ್ಞಾನಿಯ ಕೊಡುಗೆ

Prakash Pednekar
Photo Credit : News Kannada

ಬೆಳಗಾವಿ: ನಾಲ್ಕು ವರ್ಷಗಳ ಬಳಿಕ ಜಗತ್ತು ಕಾದು ನೋಡುತ್ತಿದ್ದ ಇಸ್ರೋದ ಚಂದ್ರಯಾನ ನೌಕೆ ಜುಲೈ 24ರ ಇಂದು ಮಧ್ಯಾಹ್ನ ನಭಕ್ಕೆ ಚಿಮ್ಮಲಿದೆ. ಈ ಚಂದ್ರಯಾನ-3ಕ್ಕೆ ಬೆಳಗಾವಿಯ ಯುವ ವಿಜ್ಞಾನಿ ಕೊಡುಗೆ ನೀಡುವ ಮೂಲಕ ಕುಂದಾನಗರಿ ಬೆಳಗಾವಿ ಜಿಲ್ಲೆಗೆ ಹಿರಿಮೆ ಹೆಚ್ಚಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಅನಗಡಿ ಗ್ರಾಮದ ಪ್ರಕಾಶ ಪಡ್ನೇಕರ್ ಚಂದ್ರಯಾನ-3 ಗಾಗಿ ಶ್ರಮಿಸುತ್ತಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುವ ಕಾರ್ಯಕ್ಕೆ ಬೆಳಗಾವಿ ಯುವ ವಿಜ್ಞಾನಿ ಸಾಥ್ ನೀಡಿದ್ದು, ಕಳೆದ 5 ವರ್ಷಗಳಿಂದ ಶ್ರೀಹರಿಕೋಟಾದಲ್ಲಿ ಯುವ ವಿಜ್ಞಾನಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾಂತ್ರಿಕ ದೋಷದಿಂದ ವಿಫಲವಾಗಿದ್ದ ಚಂದ್ರಯಾನ-2 ನಲ್ಲೂ ಪ್ರಕಾಶ ಕೆಲಸ ಮಾಡಿದ್ದರು. ಸದ್ಯ ಚಂದ್ರಯಾನ-3 ಸಕ್ಸಸ್‌ಗಾಗಿ ಯುವ ವಿಜ್ಞಾನಿ ಪ್ರಕಾಶ ಪಡ್ನೇಕರ್ ಶ್ರಮವಹಿಸಿದ್ದು, ಇಂದು ಮಧ್ಯಾಹ್ನ ಶ್ರೀಹರಿಕೋಟಾದಿಂದ ಚಂದ್ರಯಾನ-3 ಉಡಾವಣೆ ಆಗಲಿದೆ. ಚಂದ್ರಯಾನ-3ರ  ಎಲ್ಲ ಕಾರ್ಯತಂತ್ರಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಭಾರತವು ಚಂದ್ರನಲ್ಲಿ ತನ್ನ ಮಿಷನ್​ನ್ನು ಸುರಕ್ಷಿತ ಲ್ಯಾಂಡಿಂಗ್ ಮಾಡುವ ನಾಲ್ಕನೇ ರಾಷ್ಟ್ರವಾಗಲಿದೆ. ಬಾಹ್ಯಾಕಾಶ ಸಂಶೋಧನೆಯ ಕ್ಷೇತ್ರದಲ್ಲಿ ಭಾರತ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಈ ಮೂಲಕ ಪ್ರದರ್ಶಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು