ಉತ್ತರ ಪ್ರದೇಶ: ಮುಸ್ಲಿಂ ಮಹಿಳೆಯರು ಇನ್ನು ಮುಂದೆ ಬ್ಯೂಟಿ ಪಾರ್ಲರ್ಗಳಿಗೆ ಹೋಗುವಂತಿಲ್ಲ ಎಂದು ಉತ್ತರ ಪ್ರದೇಶದ ಮುಸ್ಲಿಂ ಮೌಲ್ವಿಯೊಬ್ಬರುಆದೇಶ ಹೊರಡಿಸಿದ್ದಾರೆ. ಅದರಲ್ಲೂ ಪುರುಷರು ಕೆಲಸ ಮಾಡುವ ಬ್ಯೂಟಿ ಪಾರ್ಲರ್ಗಳಿಗಂತೂ ಹೋಗಲೇ ಬಾರದು.
ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಮುಸ್ಲಿಂ ಧರ್ಮಗುರು ಮುಫ್ತಿ ಅಸದ್ ಖಾಸ್ಮಿ ಎಂಬುವರು ಈ ಆದೇಶವನ್ನು ನೀಡಿದವರು.
ಅಂದಹಾಗೆ ಪುರುಷರು ಕೆಲಸ ಮಾಡುವ ಬ್ಯೂಟಿ ಪಾರ್ಲರ್ಗೆ ಮುಸ್ಲಿಂ ಮಹಿಳೆಯರು ಹೋಗುವುದು ಅಪರಾಧವಂತೆ. ಮುಸ್ಲಿಂ ಧರ್ಮದ ಪ್ರಕಾರ ಅದು ನಿಷಿದ್ಧ ಮತ್ತು ಕಾನೂನು ಬಾಹಿರವಂತೆ. ಮುಸ್ಲಿಂ ಮಹಿಳೆಯರು ಪುರುಷರು ಉದ್ಯೋಗದಲ್ಲಿರುವ ಬ್ಯೂಟಿ ಪಾರ್ಲರ್ಗಳಿಗೆ ಭೇಟಿ ನೀಡುವುದನ್ನು ತಡೆಯಿರಿ ಎಂದು ಮುಸ್ಲಿಂ ಪುರುಷರಿಗೆ ಮುಫ್ತಿ ಅಸದ್ ಖಾಸ್ಮಿ ಆದೇಶಿಸಿದ್ದಾರೆ. ಇನ್ನು ಮಹಿಳೆಯರು ಮಾತ್ರ ಕೆಲಸ ಮಾಡುವ ಸಲೂನ್ಗಳನ್ನು ಆರಿಸಿಕೊಳ್ಳಿ ಎಂದು ಈತ ಮುಸ್ಲಿಂ ಮಹಿಳೆಯರಿಗೆ ಸಲಹೆ ನೀಡಿದ್ದಾರೆ.