ಲಕ್ನೋ: ತಮ್ಮನಿಗೆ ಕಿಡ್ನಿ ದಾನ ಮಾಡಿದ ವಿಚಾರಕ್ಕೆ ಪತಿ ಪತ್ನಿಗೆ ತಲಾಖ್ ನೀಡಿರುವ ಘಟನೆ ಉತ್ತರಪ್ರದೇಶದ ಬೈರಿಯಾಹಿ ಗ್ರಾಮದಲ್ಲಿ ನಡೆದಿದೆ.
ಪತ್ನಿಗೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಪತಿ ತಲಾಖ್ ನೀಡಿದ್ದಾನೆ. ಮಹಿಳೆಯ ತಮ್ಮ ಅನಾರೋಗ್ಯದಿಂದ ಬಳಲುತ್ತಿದ್ದನು. ತನ್ನ ಸಹೋದರನನ್ನು ಉಳಿಸಿಕೊಳ್ಳುವ ಸಲುವಾಗಿ ಮಹಿಳೆ ತನ್ನ ಒಂದು ಕಿಡಿಯನ್ನು ದಾನ ಮಾಡಿದ್ದಾರೆ. ಇದಾದ ಬಳಿಕ ಮೆಸೇಜ್ ಮಾಡುವ ಮೂಲಕ ಪತಿಗೆ ವಿಚಾರ ತಿಳಿಸಿದ್ದಾರೆ.
ಇದೀಗ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಹಿಳೆ ನೀಡಿದ ದೂರಿನಲ್ಲಿ ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.