ಉತ್ತರಪ್ರದೇಶ: ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಇಡೀ ದೇಶವೇ ಸಡಗರದಲ್ಲ ಇದೆ. ಶ್ರೀ ರಾಮ ಮಂದಿರ ಉದ್ಘಾಟನೆ ಜನವರಿ 22ರಂದು ನಡೆಯಲಿದೆ. ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದಲ್ಲಿ ಮೊದಲ ಚಿನ್ನದ ದ್ವಾರವನ್ನು ಮಂಗಳವಾರ ಆಳವಡಿಸಲಾಗಿದೆ.
ಈ ದೇವಾಲಯವು ಗರ್ಭಗುಡಿಯ ದೊಡ್ಡ ಗಾತ್ರದ ಗೇಟ್ ಸೇರಿದಂತೆ 13 ಚಿನ್ನದ ಬಾಗಿಲುಗಳನ್ನು ಹೊಂದಿದೆ. ಇವೆಲ್ಲವನ್ನೂ ಮುಂದಿನ ಮೂರು ದಿನಗಳಲ್ಲಿ ರಾಮ ಮಂದಿರದಲ್ಲಿ ಸ್ಥಾಪಿಸಲಾಗುವುದು. ಮೊದಲ ಗೋಲ್ಡನ್ ಗೇಟ್ನ ಚಿತ್ರವನ್ನು ಬಿಡುಗಡೆ ಮಾಡಿದೆ. ಇದನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.