News Karnataka Kannada
Friday, May 03 2024
ವಿದೇಶ

ಗ್ರೆನೇಡ್ ಗಳೊಂದಿಗೆ ಟಿವಿ ಸ್ಟುಡಿಯೊಗೆ ನುಗ್ಗಿ ಲೈವ್ ನಲ್ಲೇ ʼಯುದ್ಧʼ ಘೋಷಣೆ

ಲೈವ್ ಕಾರ್ಯಕ್ರಮ ನಡೆಯುತ್ತಿರುವಾಗಲೇ ಟೆಲಿವಿಷನ್ ಸ್ಟುಡಿಯೊಗೆ ಗ್ರೆನೇಡ್ ಗಳೊಂದಿಗೆ ನುಗ್ಗಿದ ಬಂದೂಕುಧಾರಿಗಳು ಯುದ್ಧ ಘೋಷಿಸಿ, ಎಲ್ಲ ಭದ್ರತಾ ಪಡೆಗಳು ಹಾಗೂ ನಾಗರಿಕರನ್ನು ಹತ್ಯೆ ಮಾಡುವ ಬೆದರಿಕೆ ಹಾಕಿರುವ ಘಟನೆ ಈಕ್ವೆಡಾರ್ ನಲ್ಲಿ ನಡೆದಿದೆ ಎಂದು ಮೂಲವೊಂದು ವರದಿ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಕೂಡ ವೈರಲ್‌ ಆಗಿದೆ.
Photo Credit : News Kannada

ಕ್ವಿಟೊ: ಲೈವ್ ಕಾರ್ಯಕ್ರಮ ನಡೆಯುತ್ತಿರುವಾಗಲೇ ಟೆಲಿವಿಷನ್ ಸ್ಟುಡಿಯೊಗೆ ಗ್ರೆನೇಡ್ ಗಳೊಂದಿಗೆ ನುಗ್ಗಿದ ಬಂದೂಕುಧಾರಿಗಳು ಯುದ್ಧ ಘೋಷಿಸಿ, ಎಲ್ಲ ಭದ್ರತಾ ಪಡೆಗಳು ಹಾಗೂ ನಾಗರಿಕರನ್ನು ಹತ್ಯೆ ಮಾಡುವ ಬೆದರಿಕೆ ಹಾಕಿರುವ ಘಟನೆ ಈಕ್ವೆಡಾರ್ ನಲ್ಲಿ ನಡೆದಿದೆ ಎಂದು ಮೂಲವೊಂದು ವರದಿ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಕೂಡ ವೈರಲ್‌ ಆಗಿದೆ.

ಈ ಘಟನೆಯ ಬಳಿಕ ದೇಶದ ಅತ್ಯಂತ ಪ್ರಭಾವಿ ಅಪರಾಧಿ ಗುಂಪಿನ ವಿರುದ್ಧ ಸೇನಾ ಕಾರ್ಯಾಚರಣೆಗೆ ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಆದೇಶ ನೀಡಿದ್ದಾರೆ. ಬಂಧೂಕುಧಾರಿಗಳೂ “ಯುದ್ಧ” ಘೋಷಣೆ ಮಾಡಿದ ಬೆನ್ನಲ್ಲೇ ನೊಬೊಡೊ ದೇಶದಲ್ಲಿ ಆಂತರಿಕ ಸಶಸ್ತ್ರ ಸಂಘರ್ಷ ಸ್ಥಿತಿಯನ್ನು ಘೋಷಿಸಿದ್ದಾರೆ.

ಬಂದರು ನಗರವದ ಗುಯಾಕ್ವಿನ್ ಟಿಸಿ ಟೆಲಿವಿಷನ್ ಸ್ಟುಡಿಯೊಗೆ ರೈಫಲ್ ಮತ್ತು ಗ್ರೆನೇಡ್ ಳೊಂದಿಗೆ ದಾಳಿಕೋರರು ನುಗ್ಗಿ ಯುದ್ಧ ಘೋಷಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷರು ಈ ಹೇಳಿಕೆ ನೀಡಿದ್ದಾರೆ. ಬಂದೂಕಿನ ಸದ್ದು ಕೇಳಿದ ಮಹಿಳೆಯೊಬ್ಬರು, “ದಯವಿಟ್ಟು ಗುಂಡು ಹೊಡೆಯಬೇಡಿ” ಎಂದು ಅಂಗಲಾಚುತ್ತಿರುವುದು ಕೇಳಿಸುತ್ತಿದೆ.

ಇತ್ತ ಸುಮಾರು 30 ನಿಮಿಷಗಳ ಬಳಿಕ, ಸ್ಟುಡಿಯೊ ಪ್ರವೇಶಿಸಿದ ವ್ಯಕ್ತಿಯೊಬ್ಬ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

https://twitter.com/i/status/1744805395749609668

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು