News Karnataka Kannada
Sunday, April 28 2024
ಉತ್ತರ ಪ್ರದೇಶ

ಉತ್ತರಪ್ರದೇಶದಲ್ಲಿ ಹಲಾಲ್‌ ಪ್ರಮಾಣೀಕೃತ ವಸ್ತು ಮಾರಾಟ ನಿಷೇಧ?

Ban on sale of Halal certified products in Uttar Pradesh?
Photo Credit : News Kannada

ಲಕ್ನೊ: ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ನಿಷೇಧಕ್ಕೆ ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ನಾಲ್ಕು ಸಂಸ್ಥೆಗಳ ವಿರುದ್ಧ ದೂರು ಸಲ್ಲಿಕೆಯಾಗಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಲಕ್ನೊ ನಗರದ ಠಾಣಾ ವ್ಯಾಪ್ತಿಯಲ್ಲಿ ಸ್ಥಳೀಯರೊಬ್ಬರು ದೂರು ನೀಡಿದ್ದು, ದೂರಿನ ಪ್ರಕಾರ ಚೈನ್ನೈ ಹಲಾಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ನವದೆಹಲಿಯ ಜಮೀಯತ್‌ ಉಲೇಮಾ ಹಿಂದ್‌ ಹಲಾಲ್‌ ಟ್ರಸ್ಟ್‌, ಮುಂಬೈ ಹಲಾಲ್‌ ಕೌನ್ಸಿಲ್‌ ಆಫ್‌ ಇಂಡಿಯಾ ಮತ್ತು ಜಮೀಯತ್‌ ಉಲೇಮಾ ಎಂಬ ಸಂಸ್ಥೆಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ವಸ್ತುಗಳ ಮೇಲೆ ಹಲಾಲ್‌ ಪ್ರಮಾಣ ಪತ್ರ ನೀಡುತ್ತವೆ. ಇದಲ್ಲದೆ ಇನ್ನೂ ಹಲವು ಸಂಸ್ಥೆಗಳು ಇಂಥ ವ್ಯವಸ್ಥೆ ಅನುಸರಿಸುತ್ತಿವೆ. ಇದು ಸಾರ್ವಜನಿಕರ ನಂಬಿಕೆಯನ್ನು ಪ್ರಶ್ನಿಸುವಂತಿದೆ ಎಂದು ಆರೋಪಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು