News Karnataka Kannada
Saturday, April 27 2024
ಉತ್ತರ ಪ್ರದೇಶ

ಗ್ಯಾಂಗ್‍ಸ್ಟರ್ ಅನ್ಸಾರಿ ಸಾವು: ನನಗೆ ನ್ಯಾಯ ಸಿಕ್ಕಿದೆ ಎಂದ ಹತ್ಯೆಗೀಡಾದ ಬಿಜೆಪಿ ನಾಯಕನ ಪತ್ನಿ

: ಗ್ಯಾಂಗ್‍ಸ್ಟರ್, ರಾಜಕಾರಣಿ ಮುಖ್ತರ್ ಅನ್ಸಾರಿ ಸಾವಿನಿಂದ ನನಗೆ ನ್ಯಾಯ ಸಿಕ್ಕಿದೆ ಎಂದು ಆತನಿಂದ ಹತ್ಯೆಗೀಡಾದ ಬಿಜೆಪಿ ಶಾಸಕ ಕೃಷ್ಣಾನಂದ್ ರೈ ಅವರ ಪತ್ನಿ ಅಲ್ಕಾ ರೈ ಹೇಳಿದ್ದಾರೆ.
Photo Credit : NewsKarnataka

ಲಕ್ನೋ: ಗ್ಯಾಂಗ್‍ಸ್ಟರ್, ರಾಜಕಾರಣಿ ಮುಖ್ತರ್ ಅನ್ಸಾರಿ ಸಾವಿನಿಂದ ನನಗೆ ನ್ಯಾಯ ಸಿಕ್ಕಿದೆ ಎಂದು ಆತನಿಂದ ಹತ್ಯೆಗೀಡಾದ ಬಿಜೆಪಿ ಶಾಸಕ ಕೃಷ್ಣಾನಂದ್ ರೈ ಅವರ ಪತ್ನಿ ಅಲ್ಕಾ ರೈ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ವಾರಣಾಸಿಯಲ್ಲಿ ಮಾತನಾಡಿದ ಅವರು, ನಾನು ನ್ಯಾಯಕ್ಕಾಗಿ ದೇವರನ್ನು ಪ್ರಾರ್ಥಿಸಿದ್ದೆ, ಅದನ್ನು ದೇವರು ಈಡೇರಿಸಿದ್ದಾರೆ. ಪತಿಯ ಹತ್ಯೆಯ ನಂತರ ನಾವು ಹೋಳಿಯನ್ನು ಆಚರಿಸಿರಲಿಲ್ಲ. ನ್ಯಾಯ ಸಿಕ್ಕ ಈ ದಿನವನ್ನು ಹೋಳಿ ಎಂದು ನಾನು ಭಾವಿಸುತ್ತೇನೆ. ಆತನ ಸಾವಿನಿಂದ, ಅನಾಥರಾದ ಮಕ್ಕಳಿಗೆ ಸಂತೋಷವಾಗಿದೆ ಎಂದರು.

ಮೃತ ಮುಖ್ತರ್ ಅನ್ಸಾರಿಯ ಮಗ ಉಮರ್ ಅನ್ಸಾರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತನ್ನ ತಂದೆಗೆ ಆಹಾರದಲ್ಲಿ ವಿಷವನ್ನು ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ. ಇಡೀ ದೇಶಕ್ಕೆ ಎಲ್ಲವೂ ತಿಳಿದಿದೆ. ಎರಡು ದಿನಗಳ ಹಿಂದೆ ನಾನು ಅವರನ್ನು ಭೇಟಿಯಾಗಲು ಬಂದಿದ್ದೆ. ನನಗೆ ಅವಕಾಶ ನೀಡಿರಲಿಲ್ಲ, ಸ್ಲೋ ಪಾಯ್ಸನ್ ನೀಡಿದ ಆರೋಪದ ಬಗ್ಗೆ ನಾವು ಮೊದಲೇ ಹೇಳಿದ್ದೇವೆ. ಈಗಲೂ ನಾನು ಅದನ್ನೇ ಹೇಳುತ್ತೇನೆ. ನಮಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ನಂಬಿಕೆ ಇದೆ ಎಂದಿದ್ದಾರೆ.

ಜೈಲಿನಲ್ಲಿದ್ದ ಮುಖ್ತಾರ್ ಅನ್ಸಾರಿ ಗುರುವಾರ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಉತ್ತರ ಪ್ರದೇಶದ ಮಾವ್‍ದಿಂದ ಐದು ಬಾರಿ ಗೆದ್ದು ಶಾಸಕರಾಗಿದ್ದರು. ಅವರ ವಿರುದ್ಧ 61 ಕ್ರಿಮಿನಲ್ ಪ್ರಕರಣಗಳಿದ್ದು, ಅದರಲ್ಲಿ 15 ಕೊಲೆ ಆರೋಪದ ಪ್ರಕರಣಗಳಾಗಿವೆ ಎಂಬ ಮಾಹಿತಿ ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು