News Karnataka Kannada
Monday, May 06 2024
ಉತ್ತರ ಪ್ರದೇಶ

ಮದುವೆ ಮೆರವಣಿಗೆಯಲ್ಲಿ ವರನ ಮೇಲೆ ಆ್ಯಸಿಡ್ ಎರಚಿ ಪ್ರಿಯತಮೆ

ತನ್ನನ್ನು ಪ್ರೀತಿ ಮಾಡಿ ಮತ್ತೊಬ್ಬಳೊಂದಿಗೆ ಮದುವೆಯಾಗಲು ಮುಂದಾಗಿದ್ದ ಪ್ರಿಯಕರನ ಮುಖಕ್ಕೆ ಆತನ ಮದುವೆಯ ದಿನವೇ ಪ್ರೇಯಸಿ ಆ್ಯಸಿಡ್​ ಎರಚಿದ ಘಟನೆ ಘಟನೆ ಮಂಗಳವಾರ, ಏಪ್ರಿಲ್ 23 ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ.
Photo Credit : NewsKarnataka

ಉತ್ತರ ಪ್ರದೇಶ : ತನ್ನನ್ನು ಪ್ರೀತಿ ಮಾಡಿ ಮತ್ತೊಬ್ಬಳೊಂದಿಗೆ ಮದುವೆಯಾಗಲು ಮುಂದಾಗಿದ್ದ ಪ್ರಿಯಕರನ ಮುಖಕ್ಕೆ ಆತನ ಮದುವೆಯ ದಿನವೇ ಪ್ರೇಯಸಿ ಆ್ಯಸಿಡ್​ ಎರಚಿದ ಘಟನೆ ಘಟನೆ ಮಂಗಳವಾರ, ಏಪ್ರಿಲ್ 23 ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ.

ಯುವಕನ ಮುಖದ ಮೇಲೆ ಆ್ಯಸಿಡ್​​ ಬಿದ್ದ ಪರಿಣಾಮ ತಕ್ಷಣ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ತಾಯಿಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಲಿಯಾದ ಪೊಲೀಸ್ ಅಧಿಕಾರಿ ಮುನ್ನಾ ಲಾಲ್ ಯಾದವ್ ಹೇಳಿದ್ದಾರೆ.

ಮದುವೆಯ ಮೆರವಣಿಗೆಯ ವೇಳೆ ಯುವತಿ ವೇಷ ಮರೆಸಿಕೊಂಡು ಬಂದು ವರನ ಮುಖಕ್ಕೆ ಆ್ಯಸಿಡ್​ ಎರಚಿರುವುದಾಗಿ ತಿಳಿದುಬಂದಿದೆ. ತಕ್ಷಣ ಕುಟುಂಬಸ್ಥರು ವರನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು,ಸ್ಥಳೀಯ ಮಹಿಳೆಯರು ಯುವತಿಯನ್ನು ಹಿಡಿದು ಸರಿಯಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವಕ ಪ್ರೀತಿಸಿ ಮೋಸ ಮಾಡಿರುವುದರಿಂದಾಗಿ ಕೋಪಗೊಂಡ ಯುವತಿ ಆ್ಯಸಿಡ್​ ಎರಚಿದ್ದಾಳೆ ಎಂದು ತಿಳಿದುಬಂದಿದೆ. ಇವರಿಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದು, ಪರಸ್ಪರ ದೈಹಿಕ ಸಂಪರ್ಕವನ್ನು ಹೊಂದಿದ್ದರು ಎಂದು ತಿಳಿದುಬಂದಿದೆ. ಆದ್ರೆ ಎರಡು ಕುಟುಂಬಗಳು ಈ ಸಂಬಂಧವನ್ನು ವಿರೋಧಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು