News Karnataka Kannada
Monday, May 06 2024
ಮುಂಬೈ

ಕೊಟಕ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್ , ಆನ್‌ಲೈನ್‌ ಸೇವೆಗಳು ನಿಷೇಧ

ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಕೊಟಕ್‌ ಮಹೀಂದ್ರಾ ಬ್ಯಾಂಕ್‌ಗೆ ಆರ್‌ಬಿಐ ಶಾಕ್‌ ನೀಡಿದೆ. ನೂತನ ಗ್ರಾಹಕರಿಗೆ ಕ್ರೆಡಿಟ್‌ ಕಾರ್ಟ್‌ ವಿತರಣೆ ಮಾಡಬಾರದು. ಹಾಗೆಯೇ, ಹೊಸ ಗ್ರಾಹಕರಿಗೆ ಆನ್‌ಲೈನ್‌, ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸಬಾರದು ಎಂಬುದು ಸೇರಿ ಹಲವು ನಿರ್ಬಂಧಗಳನ್ನು ವಿಧಿಸಿದೆ.
Photo Credit : NewsKarnataka

ಮುಂಬೈ: ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಕೊಟಕ್‌ ಮಹೀಂದ್ರಾ ಬ್ಯಾಂಕ್‌ಗೆ ಆರ್‌ಬಿಐ ಶಾಕ್‌ ನೀಡಿದೆ. ನೂತನ ಗ್ರಾಹಕರಿಗೆ ಕ್ರೆಡಿಟ್‌ ಕಾರ್ಟ್‌ ವಿತರಣೆ ಮಾಡಬಾರದು. ಹಾಗೆಯೇ, ಹೊಸ ಗ್ರಾಹಕರಿಗೆ ಆನ್‌ಲೈನ್‌, ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸಬಾರದು ಎಂಬುದು ಸೇರಿ ಹಲವು ನಿರ್ಬಂಧಗಳನ್ನು ವಿಧಿಸಿದೆ.

ನೂತನ ಗ್ರಾಹಕರಿಗೆ ಕ್ರೆಡಿಟ್‌ ಕಾರ್ಡ್‌ ವಿತರಿಸುವುದು, ಅವರಿಗೆ ಆನ್‌ಲೈನ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸುವುದಕ್ಕೆ ಆರ್‌ಬಿಐ ನಿರ್ಬಂಧ ಹೇರಿರುವ ಕಾರಣ ಹಳೆಯ ಗ್ರಾಹಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈಗಾಗಲೇ ಕೊಟಕ್‌ ಮಹೀಂದ್ರಾ ಬ್ಯಾಂಕ್ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರು, ಆನ್‌ಲೈನ್‌ ಹಾಗೂ ಮೊಬೈಲ್‌ ಬ್ಯಾಂಕ್‌ ಸೌಲಭ್ಯ ಹೊಂದಿರುವವರು ಸೇವೆಗಳನ್ನು ಪಡೆಯಬಹುದಾಗಿದೆ. ಹಾಗಾಗಿ, ಹಳೆಯ ಗ್ರಾಹಕರಿಗೆ ಆರ್‌ಬಿಐ ಆದೇಶದಿಂದ ಯಾವುದೇ ತೊಂದರೆ ಆಗುವುದಿಲ್ಲ.

“ಈಗಾಗಲೇ ಆನ್‌ಲೈನ್‌, ಮೊಬೈಲ್‌ ಬ್ಯಾಂಕಿಂಗ್‌ ಸೌಲಭ್ಯಗಳನ್ನು ಹೊಂದಿರುವ ಗ್ರಾಹಕರಿಗೆ ಕೊಟಕ್‌ ಮಹೀಂದ್ರಾ ಬ್ಯಾಂಕ್‌ ಸೇವೆಗಳನ್ನು ಮುಂದುವರಿಸಬಹುದು. ಈಗಾಗಲೇ ಕ್ರೆಡಿಟ್‌ ಕಾರ್ಡ್‌ ಹೊಂದಿರುವ ಹಳೆಯ ಗ್ರಾಹಕರಿಗೂ ಸೇವೆಗಳನ್ನು ಮುಂದುವರಿಸಲು ಯಾವುದೇ ನಿರ್ಬಂಧವಿಲ್ಲ” ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು