ಶಹಜಹಾನ್ಪುರ: ಮಸೀದಿಯ ಧ್ವಜವನ್ನು ತೆಗೆದು ಕೇಸರಿ ಧ್ವಜ ಹಾರಿಸಿದ ಮೂವರನ್ನು ಬಂಧಿಸಿದ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದೆ.
ಸೋಮವಾರ ರಾತ್ರಿ ರಾಮಚಂದ್ರ ಮಿಷನ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್ಬಾಗ್ ಪ್ರದೇಶದಲ್ಲಿ ಕೆಲವು ದುಷ್ಕರ್ಮಿಗಳು ಮಸೀದಿಯೊಂದರ ಮೇಲೆ ಹತ್ತಿ, ಹಸಿರು ಬಣ್ಣದ ಧ್ವಜವನ್ನು ತೆಗೆದು ಕೇಸರಿ ಧ್ವಜವನ್ನು ನೆಟ್ಟಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಮೀನಾ ತಿಳಿಸಿದ್ದಾರೆ.
ಅಲ್ಲಿನ ನಿವಾಸಿಗಳ ದೂರಿನ ಮೇರೆಗೆ ಅಂಕಿತ್ ಕಥೇರಿಯಾ, ರೋಹಿತ್ ಜೋಶಿ ಮತ್ತು ರೋಹಿತ್ ಸಕ್ಸೇನಾ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೀನಾ ತಿಳಿಸಿದ್ದಾರೆ.