ಉತ್ತರ ಪ್ರದೇಶ: ಕಾನ್ಸ್ಸ್ಟೇಬಲ್ವೊಬ್ಬರು ಕರ್ತವ್ಯದಲ್ಲಿರುವಾಗಲೇ ಬಲ್ಬ್ ಕದ್ದು ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಸಿಕಂದರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್ ಆಗಿದೆ.
ವೈರಲ್ ಆಗುತ್ತಿರುವ ದೃಶ್ಯದಲ್ಲಿ ಕಾನ್ಸ್ಸ್ಟೇಬಲ್ ಮೊಬೈಲ್ನಲ್ಲಿ ಮಾತನಾಡುತ್ತಾ ಬಂದು ಕೊನೆಗೆ ಚಯರ್ ಮೇಲೇರಿ ಬಲ್ಬ್ ಕದಿಯುತ್ತಾನೆ. ಅಂದಹಾಗೆಯೇ ಕಾನ್ಸ್ಟೇಬಲ್ ಅಂಗಡಿಯ ಬಲ್ಬ್ ಅನ್ನು ಕದ್ದಿದ್ದಾನೆ. ಈ ಘಟನೆ ಏಪ್ರಿಲ್ 20ರಂದು ನಡೆದಿದೆ ಎನ್ನಲಾಗುತ್ತಿದ್ದು, ಮಾರ್ಚ್ 23ರಿಂದ ಸಿಸಿಟಿವಿ ದೃಶ್ಯ ವೈರಲ್ ಆಗುತ್ತಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.