ಅಯೋಧ್ಯೆ: 2024 ರ ಮೊದಲ ದಿನದಂದು, ಅಯೋಧ್ಯೆಯಲ್ಲಿ ರಾಮಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ‘ರಾಮ್ ಲಲ್ಲಾ’ ಗೆ 56 ನೈವೇದ್ಯ ’56 ಭೋಗ್ ಪ್ರಸಾದ’ವನ್ನು ದೇವರಿಗೆ ಅರ್ಪಿಸಲಿದ್ದಾರೆ.
ಹೊಸ ವರ್ಷದ ಸಂದರ್ಭದಲ್ಲಿ ದೇವರಿಗೆ 56 ನೈವೇದ್ಯ ಅರ್ಪಿಸುವುದು ಹಳೆಯ ಸಂಪ್ರದಾಯವಾಗಿದೆ. ಈ ನೈವೇದ್ಯವು ರಸಗುಲ್ಲಾ, ಲಡ್ಡು, ಬರ್ಫಿ ಹೀಗೆ ವಿವಿಧ ರೀತಿಯ ಸಿಹಿಭಕ್ಷ್ಯಗಳನ್ನು ಒಳಗೊಂಡಿದೆ.
ಲಕ್ನೋದ ಪ್ರಸಿದ್ಧ ಅಂಗಡಿಯಾದ ‘ಮಧುರಿಮಾ’ದಿಂದ ಪ್ರಸಾದಕ್ಕಾಗಿ ಸಿಹಿ ಆರ್ಡರ್ ಮಾಡಲಾಗಿದೆ. ರಾಮಲಲ್ಲಾ ಮಂದಿರ ನಿರ್ಮಾಣವಾಗುವಾಗ 56 ಬಗೆಯ ನೈವೇದ್ಯಗಳನ್ನು ಅರ್ಪಿಸುವುದು ನಮ್ಮ ಸಂಕಲ್ಪವಾಗಿತ್ತು. 4 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದೇವೆ, ಜನವರಿ 22 ರಂದು ರಾಮಲಲ್ಲಾಗಾಗಿ ಮತ್ತೆ 56 ಬಗೆಯ ಭೋಗ್ ಪ್ರಸಾದವನ್ನು ತರಲಾಗುವುದು ಎಂದು ಮಧುರಿಮಾ ಸ್ವೀಟ್ ಅಂಗಡಿಯ ಮಾಲೀಕ ಸಜಲ್ ಗುಪ್ತಾ ಹೇಳಿದರು.
ಜನವರಿ 22 ರಂದು ಮಧ್ಯಾಹ್ನ ಮತ್ತು 12.45 ರ ನಡುವೆ ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಟ್ರಸ್ಟ್ ನಿರ್ಧರಿಸಿದೆ.