ಉತ್ತರಪ್ರದೇಶ : ಉತ್ತರಪ್ರದೇಶದ ಮುಜಾಫರ್ನಗರದ ಗ್ರಾಮವೊಂದರಲ್ಲಿ ಯುವತಿ ಮೇಲೆ ಇಬ್ಬರು ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಯುವತಿ ಮೇಲೆ ಅತ್ಯಾಚಾರ ಎಸಗಿದ ವಿಡಿಯೋ ಚಿತ್ರೀಕರಿಸಿದ್ದು, ವಿಡಿಯೋ ಡಿಲೀಟ್ ಮಾಡಲು ಆಕೆಯನ್ನು ಕರೆಸಿ ಮತ್ತೆ ಅತ್ಯಾಚಾರ ಎಸಗಿದ್ದಾರೆ.
ಭೋಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅನ್ವಯ ಮನೆ ಕೊಡಿಸುತ್ತೇವೆ ಎಂದು ಯೋಗೀಶ್ ಹಾಗೂ ಬಬ್ಲು ಎಂಬಾತ ಯುವತಿಯನ್ನು ಹೊಲಕ್ಕೆ ಕರೆಸಲಾಗಿದೆ. ಸರದಿ ಅತ್ಯಾಚಾರ ನಡೆಸಿದ್ದು, ಒಬ್ಬಾತ ವಿಡಿಯೋ ಚಿತ್ರೀಕರಿಸಿದ್ದಾರೆ.
ಇದಾದ ನಂತರ ವಿಡಿಯೋ ಡಿಲೀಟ್ ಮಾಡಬೇಕೆಂದರೆ ಕರೆದ ಜಾಗಕ್ಕೆ ಬರಬೇಕು ಎಂದು ಯುವತಿಯನ್ನು ಪೀಡಿಸಿದ್ದಾರೆ. ಬಂದ ನಂತರ ಮತ್ತೆ ಆಕೆ ಮೇಲೆ ಅತ್ಯಾಚಾರ ಎಸಗಿದ್ದು, ವಿಡಿಯೋ ಡಿಲೀಟ್ ಮಾಡದೇ ಕಳುಹಿಸಿದ್ದಾರೆ. ಯುವತಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.