ಫಾರೂಕಾಬಾದ್: ಉತ್ತರ ಪ್ರದೇಶ ರಾಜ್ಯ ಸರಕಾರ ಮಾಲಕತ್ವದ ದಕ್ಷಿಣಾಂಚಲ್ ವಿದ್ಯುತ್ ವಿತರಣ ನಿಗಮ ಲಿಮಿಟೆಡ್ನಲ್ಲಿ (ಡಿವಿವಿಎನ್ಎಲ್) ಸಬ್ ಡಿವಿಶನಲ್ ಆಫೀಸರ್ (ಎಸ್ಡಿಒ) ಆಗಿ ಸೇವೆ ಸಲ್ಲಿಸುತ್ತಿರುವ ರವೀಂದ್ರ ಪ್ರಕಾಶ್ ಗೌತಮ್ ಎಂಬವರನ್ನು ತಮ್ಮ ಚೇಂಬರ್ನಲ್ಲಿ ಅಲ್ ಕಾಯಿದಾ ಉಗ್ರವಾದಿ ಸಂಘ ಟನೆಯ ಮಾಜಿ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಫೋಟೋವನ್ನುಗೋಡೆಗೆ ನೇತು ಹಾಕಿಕೊಂಡಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ.
ಫೋಟೋ ಕೆಳಗೆ ವಿಶ್ವದ ಶ್ರೇಷ್ಠ ಜೂನಿಯರ್ ಎಂಜಿನಿಯರ್ ಎಂದು ಲಾಡೆನ್ನನ್ನು ಬಣ್ಣಿಸಿದ್ದರು. ಅಮಾನತು ಆದೇಶ ಜಾರಿಯಾದ ನಂತರ ಫೋಟೋ ವನ್ನು ಕಚೇರಿಯಿಂದ ತೆರವುಗೊಳಿ ಸ ಲಾಗಿದೆ. ಆದರೆ ತನ್ನ ನಡೆಯನ್ನು ರವೀಂದ್ರ ಸಮರ್ಥಿಸಿಕೊಂಡಿದ್ದಾರೆ.