News Karnataka Kannada
Wednesday, May 08 2024
ತೆಲಂಗಾಣ

ಸೋನಿಯಾ ಗಾಂಧಿಯನ್ನು ‘ಭಾರತ ಮಾತೆ’ಗೆ ಹೋಲಿಕೆ ಮಾಡಿ ಕಾಂಗ್ರೆಸ್​ ಯಡವಟ್ಟು

Sonia Gandhi
Photo Credit : News Kannada

ತೆಲಂಗಾಣ: ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿಯನ್ನು ‘ಭಾರತ ಮಾತೆ’ಗೆ ಹೋಲಿಕೆ ಮಾಡಿರುವ ಫೋಟೋ ಒಂದು ದೇಶದಲ್ಲಿ ಸಂಚಲನ ಮೂಡಿಸಿದೆ. ತೆಲಂಗಾಣ ಕಾಂಗ್ರೆಸ್​ ಈ ನಡೆ ವಿರುದ್ಧ ಬಿಜೆಪಿ ಕೆಂಡಕಾರಿದೆ.

ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಕಳೆದದಿನ ಕಾಂಗ್ರೆಸ್​ ಬೃಹತ್ ಸಮಾವೇಶ ನಡೆಸಿತ್ತು. ಈ ವೇಳೆ ಕರ್ನಾಟಕ ಚುನಾವಣೆಯಲ್ಲಿ ಗ್ಯಾರಂಟಿ ಅಸ್ತ್ರಗಳನ್ನು ಪ್ರಯೋಗಿಸಿದಂತೆ, ಪ್ರಮುಖ 6 ಉಚಿತ ಯೋಜನೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ನಡೆದ ಬೃಹತ್ ಸಮಾವೇಶಕ್ಕೆ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್​ನ ಪ್ರಮುಖರು ಭಾಗಿಯಾಗಿದ್ದರು.

ಬೃಹತ್ ಸಮಾವೇಶ ಹಿನ್ನೆಲೆಯಲ್ಲಿ ತೆಲಂಗಾಣ ಕಾಂಗ್ರೆಸ್​ ನಾಯಕರು ತಮ್ಮ ಫೋಟೋಗಳ ಜೊತೆಗೆ ರಾಷ್ಟ್ರೀಯ ನಾಯಕರ ಕಟೌಟ್​ ಮತ್ತು ಬ್ಯಾನರ್​​ಗಳನ್ನು ಹಾಕಿದ್ದರು. ಅದರ ಒಂದು ಕಟೌಟ್​ನಲ್ಲಿ ಸೋನಿಯಾ ಗಾಂಧಿಯನ್ನು ಭಾರತ ಮಾತೆಗೆ ಹೋಲಿಕೆ ಮಾಡಿದ್ದಾರೆ. ರಾಷ್ಟ್ರಧ್ವಜ ಬಣ್ಣದ ಸೀರೆಯನ್ನು ಸೋನಿಯಾ ಗಾಂಧಿಗೆ ತೊಡಿಸಿ, ಆಭರಣಗಳನ್ನು ಹಾಕಿ ಭಾರತ ಮಾತೆಯ ರೀತಿಯಲ್ಲಿ ಕಟೌಟ್ ನಿಲ್ಲಿಸಲಾಗಿದೆ.

ಈ ಕಟೌಟ್ ದೇಶಭಕ್ತರನ್ನು, ಬಿಜೆಪಿಗರ ಕಣ್ಣು ಕೆಂಪಾಗುವಂತೆ ಮಾಡಿದೆ. ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿ, ಜಾಮೀನಿನ ಮೇಲೆ ಹೊರಗಿರುವ ಸೋನಿಯಾ ಗಾಂಧಿಯನ್ನು ಹೋಲಿಸಿ ಭಾರತ ಮಾತೆಗೆ ಕಾಂಗ್ರೆಸ್​ ಅವಮಾನಿಸಿದೆ ಎಂದು ಕೆಂಡಕಾರಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು