ಹೈದರಾಬಾದ್: ಮಹಿಳಾ ಪೊಲೀಸ್ ಒಬ್ಬರು ವಿದ್ಯಾರ್ಥಿನಿಯೋರ್ವಳ ಕೂದಲು ಹಿಡಿದು ಎಳೆದ ವೀಡಿಯೊವೊಂದು ವೈರಲ್ ಆಗಿದೆ. ಎಬಿವಿಪಿ ಮಹಿಳಾ ಕಾರ್ಯಕರ್ತೆ ಎನ್ನಲಾದ ಯವತಿಯ ಕೂದಲು ಹಿಡಿದು ಇಬ್ಬರು ಮಹಿಳಾ ಪೊಲೀಸರು ಸ್ಕೂಟಿಯಲ್ಲಿ ಎಳೆದೊಯ್ದ ಘಟನೆ ತೆಲಂಗಾಣದ ರಂಗಾ ರೆಡ್ಡಿಯಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಎಬಿವಿಪಿಯ ಈ ಮಹಿಳಾ ಕಾರ್ಯಕರ್ತೆ ಪ್ರೊಫೆಸರ್ ಜಯಶಂಕರ್ ತೆಲಂಗಾಣ ರಾಜ್ಯ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ಹೈಕೋರ್ಟ್ ನಿರ್ಮಾಣಕ್ಕಾಗಿ ವಿಶ್ವವಿದ್ಯಾಲಯದ 100 ಎಕರೆ ಭೂಮಿಯನ್ನು ನೀಡುವ ಕಾಂಗ್ರೆಸ್ ಸರ್ಕಾರದ ನಿರ್ಧಾರದ ವಿರುದ್ಧ ವಿದ್ಯಾರ್ಥಿ ಪ್ರತಿಭಟನೆ ನಡೆಸುತ್ತಿದ್ದಳು.
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಬಿಆರ್ಎಸ್ ನಾಯಕಿ ಕೆ.ಕವಿತಾ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಧ್ಯಪ್ರವೇಶವನ್ನು ಕೋರಿದ್ದಾರೆ. ಈ ವರ್ತನೆಗೆ ತೆಲಂಗಾಣ ಪೊಲೀಸರು ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಹೇಳಿದರು.
A disturbing incident occurred in Telangana, where a prominent woman leader of @ABVPTelangana was forcibly dragged by hair by @TelanganaPolice. This act of cruelty towards a woman who is actively working for students' rights is deeply disheartening. The incident highlights the… pic.twitter.com/wsSvDW2T0G
— Matam Mayurnath (मोदी की परिवार) (@Mayurmatam) January 24, 2024