News Karnataka Kannada
Saturday, May 04 2024
ತೆಲಂಗಾಣ

ವಿಡಿಯೋ: ಪೊಲೀಸ್‌ ಇಲಾಖೆಯ ಕಾರು ಬಳಸಿ ಪ್ರಿ ವೆಡ್ಡಿಂಗ್‌ ಶೂಟ್‌ ಮಾಡಿಸಿಕೊಂಡ ಪೊಲೀಸ್‌ ದಂಪತಿ

pre-wedding shoot
Photo Credit : News Kannada

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್‌ ಶೂಟ್ ಇಲ್ಲದ ಮದುವೆಗಳು ಅಪೂರ್ಣವೆಂದು ಪರಿಗಣಿಸುವಷ್ಟು ಮಟ್ಟಕ್ಕೆ ಅದರ ಕ್ರೇಜ್‌ ಹುಟ್ಟಿಕೊಂಡಿದೆ.‌ ಇದೀಗ ಹೈದರಾಬಾದ್ ಪೊಲೀಸ್ ಅಧಿಕಾರಿಗಳಾದ ದಂಪತಿಗಳು ಸಹ ಈ ಪ್ರವೃತ್ತಿಯನ್ನು ಅನುಸರಿಸಿ ತಮ್ಮ ಪ್ರೀ ವೆಡ್ಡಿಂಗ್‌ ಶೂಟ್ ಮಾಡಿದರು.

ಅಲ್ಲದೆ ಇದರ ವಿಡಿಯೋ ಸೋಶಿಯಲ್‌ ಮಿಡಿಯಾದಲ್ಲಿ ಸಕತ್‌ ವೈರಲ್‌ ಆಗಿದೆ. ಆದರೆ ಈ ವಿಡಿಯೋ  ವೈರಲ್​​​ ಆಗುತ್ತಿದ್ದಂತೆ ಮಿಶ್ರ ಪ್ರಕ್ರಿಯೆಗಳು ಬಂದಿದೆ. ವೀಡಿಯೊದಲ್ಲಿ, ಪೊಲೀಸ್ ದಂಪತಿಗಳು ಪೊಲೀಸ್ ಠಾಣೆಯಲ್ಲಿ ಸಮವಸ್ತ್ರದಲ್ಲಿ ಮತ್ತು ಕರ್ತವ್ಯದಲ್ಲಿರುವುದನ್ನು ಕಾಣಬಹುದು. ಇದರಲ್ಲಿ ಎರಡು ನಿಮಿಷಗಳ ಹಾಡಿನ ದೃಶ್ಯವಿದೆ.

ಇದರಲ್ಲಿ ಇಬ್ಬರು ಅಧಿಕಾರಿಗಳು ತಮ್ಮ ಸಮವಸ್ತ್ರವನ್ನು ಧರಿಸಿ ಪೊಲೀಸ್ ಠಾಣೆಗೆ ಪ್ರವೇಶಿಸುವುದನ್ನು ಕಾಣಬಹುದು. ಚಿತ್ರೀಕರಣದಲ್ಲಿ ಅವರು ಪೊಲೀಸ್ ವಾಹನಗಳನ್ನು ಕೂಡ ಬಳಸಿದ್ದಾರೆ. ಕೆಲವರು ಈ ಇಬ್ಬರು ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿದರೆ, ಇನ್ನು ಕೆಲವರು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ.

ಈ ವಿಡಿಯೋ ಬಗ್ಗೆ ಪ್ರಕ್ರಿಯೆ ನೀಡಿದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಈ ಪೊಲೀಸ್ ದಂಪತಿಗಳು ನಮ್ಮ ಇಲಾಖೆಯ ಕಾರು ಮತ್ತು ಸಮಸ್ತ್ರವನ್ನು ಫೋಟೋ ಶೂಟ್​​​​​​ಗೆ ಬಳಸಿರುವುದರಲ್ಲಿ ಯಾವುದೇ ತೊಂದರೆ ಇಲ್ಲ, ನಮ್ಮ ಅನುಮತಿ ಪಡೆದು ಈ ಶೂಟಿಂಗ್​​​ಮಾಡಿದ್ದಾರೆ ಎಂದು ಹೇಳಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 4 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು