ಚೆನ್ನೈ : ಇಲ್ಲಿಯ ಕೊಟ್ಟಾವಲಚಾವಡಿ ಪ್ರದೇಶದ ವೀರಭದ್ರ ದೇವಸ್ಥಾನದಲ್ಲಿ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣದಲ್ಲಿ ಮುರಳಿಕೃಷ್ಣನ್ ಹೆಸರಿನ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
‘ನನ್ನ ಆರೋಗ್ಯ ಸರಿಯಾಗಿಲ್ಲ. ನನ್ನ ಆರೋಗ್ಯವನ್ನು ಗುಣಪಡಿಸುವಂತೆ ನಾನು ಪ್ರತಿದಿನ ದೇವರನ್ನು ಪ್ರಾರ್ಥಿಸುತ್ತಿದ್ದೆನು. ಆದರೆ ದೇವರು ನನ್ನ ಇಚ್ಛೆಯನ್ನು ಪೂರ್ಣಗೊಳಿಸಲಿಲ್ಲ. ಆದ್ದರಿಂದ, ನಾನು ಸಿಟ್ಟಿನಲ್ಲಿ ದೇವಸ್ಥಾನದ ಮೇಲೆ ದಾಳಿ ಮಾಡಿದೆ’ ಎಂದು ಮುರಳಿಕೃಷ್ಣನ್ ಪೊಲೀಸರಿಗೆ ತಿಳಿಸಿದ್ದಾನೆ. “ಬಾಂಬ್ ಎಸೆಯುವಾಗ ಮುರಳಿಕೃಷ್ಣನ್ ಮತ್ತಿನಲ್ಲಿ ಇದ್ದನು”, ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅವನ ವಿರುದ್ಧ ಈ ಮೊದಲು ಇತರ ಪ್ರಕರಣಗಳು ದಾಖಲಾಗಿವೆ. ಇತರ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.