ಹೈದರಾಬಾದ್: ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದ್ದ ಖಾಸಗಿ ಸಂಸ್ಥೆಯೊಂದರ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಸಂಸ್ಥೆಯ ಸಿಇಒ ಸಾವನ್ನಪ್ಪಿದ್ದಾರೆ.
ಗುರುವಾರದ ಸಂಭ್ರಮಾಚರಣೆಯ ಸಮಯದಲ್ಲಿ ವಿಸ್ಟೆಕ್ಸ್ (Vistex) ಕಂಪೆನಿಯ CEO ಸಂಜಯ್ ಷಾ ಮತ್ತು ಅವರ ಸಹೋದ್ಯೋಗಿಯನ್ನು ಐರನ್ ಗೂಡಿನಲ್ಲಿರಿಸಿ ಕೆಳಗಿಳಿಸಲು ತಯಾರಿ ನಡೆಸಿದ್ದರು. ಈ ವೇಳೆ ಒಳಗಿದ್ದ ಇಬ್ಬರು ನೃತ್ಯ ಮಾಡತೊಡಗಿದಾಗ ಕೇಜ್ ಮಗುಚಿದ್ದು, ಒಳಗಿದ್ದವರು ಕೆಳಗೆ ಬಿದ್ದಿದ್ದಾರೆ.
ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಿಇಒ ಸಂಜಯ್ ಷಾ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರೆ, ಅವರ ಸಹೋದ್ಯೋಗಿಯ ಸ್ಥಿತಿ ಗಂಭೀರವಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಕಂಪೆನಿಯ ಅಧಿಕಾರಿಯೊಬ್ಬ ನೀಡಿದ ದೂರನ್ನಾಧರಿಸಿ ಫಿಲ್ಮ್ ಸಿಟಿ ಈವೆಂಟ್ ಮ್ಯಾನೇಜ್ಮೆಂಟ್ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ.