News Karnataka Kannada
Saturday, May 11 2024
ತೆಲಂಗಾಣ

ಭಾರತದ ಮಾಜಿ ಫುಟ್ಬಾಲ್ ಆಟಗಾರ ಹಬೀಬ್ ನಿಧನ

Indian football legend
Photo Credit : Twitter

ಹೈದರಬಾದ್:  ಭಾರತ ಫುಟ್‌ಬಾಲ್ ತಂಡದ ಭಾಗವಾಗಿದ್ದ ಅತ್ಯುತ್ತಮ ಫುಟ್‌ಬಾಲ್ ಆಟಗಾರ ಮೊಹಮ್ಮದ್ ಹಬೀಬ್ ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ. ವಿಸ್ಮೃತಿ ಮತ್ತು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ 74 ವರ್ಷ ವಯಸ್ಸಿನ ಹಬೀಬ್ ಅವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಭಾರತದ ಲೆಜೆಂಡರಿ ಫುಟ್ಬಾಲ್ ಕ್ಲಬ್ ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್ ಅಲ್ಲದೆ, ಅವರು ಮೊಹಮ್ಮದ್ ಸ್ಪೋರ್ಟಿಂಗ್‌ ಪರವೂ ಆಡಿದ್ದರು. 1970ರಂದು ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ (1970 ) ಕಂಚಿನ ಪದಕ ಪಡೆಯುವಲ್ಲಿ ಇವರು ಪ್ರಮುಖರಾಗಿದ್ದರು.

70ರ ದಶಕದಲ್ಲಿ ಮೋಹನ್ ಬಗಾನ್ ಪರ ಆಡುತ್ತಿದ್ದಾಗ ಶ್ರೇಷ್ಠ ಫುಟ್ಬಾಲ್ ಆಟಗಾರ ಬ್ರೆಜಿಲಿಯನ್ ಪೀಲೆ ಪ್ರತಿನಿಧಿಸಿದ್ದ ನ್ಯೂಯಾರ್ಕ್ ಕಾಸ್ಮೊಸ್ ತಂಡದ ವಿರುದ್ಧ ಗೋಲು ದಾಖಲಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಹಬೀಬ್ ಪಾತ್ರರಾಗಿದ್ದರು. ಅವರು ಭಾರತಕ್ಕಾಗಿ 35 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು 11 ಗೋಲುಗಳನ್ನು ದಾಖಲಿಸಿದ್ದರು.

ಹಬೀಬ್ ನಿಧನಕ್ಕೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಸಂತಾಪ ವ್ಯಕ್ತಪಡಿಸಿದೆ. ಸಂತಾಪ ಸೂಚಿಸಿ ಮಾತನಾಡಿದ ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ, ‘ಹಬೀಬ್ ಮೋಹನ್ ಬಗಾನ್‌ನಲ್ಲಿ ಫುಟ್‌ಬಾಲ್ ದಿಗ್ಗಜರಾಗಿದ್ದರು ಮತ್ತು ಟಿಎಫ್‌ಎಯಲ್ಲಿ ಅವರ ತರಬೇತುದಾರರಾಗಿದ್ದರು. 1970ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪದಕ ಗೆಲ್ಲುವಲ್ಲಿ ಹಬೀಬ್ ಅವರ ಕೊಡುಗೆ ಸದಾ ಸ್ಮರಣೀಯ’ ಎಂದಿದ್ದಾರೆ. ಅದೇ ಸಮಯದಲ್ಲಿ, ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಶಾಜಿ ಪ್ರಭಾಕರನ್ ಅವರು ‘ಹಬೀಬ್ ಅವರ ಕಾಲದ ಅತ್ಯುತ್ತಮ ಫುಟ್‌ಬಾಲ್ ಆಟಗಾರ ಮತ್ತು ಅವರ ಜೀವನದುದ್ದಕ್ಕೂ ಫುಟ್‌ಬಾಲ್‌ಗೆ ಮೀಸಲಾಗಿದ್ದರು’ ಎಂದು ಹೇಳಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು