ಚೆನ್ನೈ: ತನ್ನ ಉದ್ಯೋಗಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಲು ಚೆನ್ನೈ ಮೂಲದ ಐಟಿ ಸಂಸ್ಥೆಯೊಂದು ತನ್ನ 50 ಉದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡಿದೆ.
ಐಡಿಯಾಸ್2ಐಟಿ ಟೆಕ್ನಾಲಜಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ಮುಖ್ಯಸ್ಥರಾದ ಮುರಳಿ ಅವರು ತಮ್ಮ ಪತ್ನಿಯೊಂದಿಗೆ 2009 ರಲ್ಲಿ ಸಂಸ್ಥೆಯನ್ನು ಸ್ಥಾಪಿಸಿದರು.
ದೀರ್ಘಕಾಲಗಳ ಕಾಲ ಸೇವೆ ಸಲ್ಲಿಸಿದ 50 ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮುರಳಿ ಹಾಗೂ ಅವರ ಪತ್ನಿಯ ಷೇರುಗಳನ್ನು ಪರಿವರ್ತಿಸಿ ಶೇ.33ರಷ್ಟನ್ನು ದೀರ್ಘಾವಧಿಯ ಉದ್ಯೋಗಿಗಳಿಗೆ ನೀಡಲು ಬಯಸಿದ್ದಾರೆ.
ಕಂಪನಿಯು ಕಳೆದ ವರ್ಷ ಉದ್ಯೋಗಿಗಳ ಕಠಿಣ ಪರಿಶ್ರಮಕ್ಕೆ ಏನಾದರೂ ಹಿಂದಿರುಗಿ ನೀಡಬೇಕೆಂದು ಬಯಸಿ 100 ಕಾರುಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎನ್ನುವ ಮಾಹಿತಿ ನೀಡಿದ್ದಾರೆ.