News Karnataka Kannada
Monday, May 06 2024
ತಮಿಳುನಾಡು

ಚಂದ್ರಯಾನ-3 ಯಶಸ್ಸಿನ ಹಿಂದಿದೆ 54 ನಾರಿಯರ ಶಕ್ತಿ

women behind Chandrayaan-3
Photo Credit : News Kannada

ತಮಿಳುನಾಡು: ಕಳೆದ ಕೆಲವು ವರ್ಷಗಳಿಂದ ಭಾರತ ಬಾಹ್ಯಾಕಾಶ ಪರಿಶೋಧನೆಯಲ್ಲಿ ಮತ್ತೊಂದು ಹಂತಕ್ಕೆ ಕಾಲಿಟ್ಟಿದೆ. ಚಂದ್ರಯಾನ, ಮಂಗಳಯಾನದಂತಹ ಗ್ರಹಗಳಿಗೆ ಭಾರತ ಕಳುಹಿಸಿದ ಪ್ರತಿಯೊಂದು ಉಪಗ್ರಹವೂ ಜಗತ್ತನ್ನು ಹಿಂತಿರುಗಿ ನೋಡುವಂತೆ ಮಾಡಿದೆ. ಈ ಮಧ್ಯೆ ಇಸ್ರೋ ಇಂದು ಚಂದ್ರಯಾನ 3 ಉಪಗ್ರಹವನ್ನು ಉಡಾವಣೆ ಮಾಡಲಿದೆ. ಇಂದು ಮಧ್ಯಾಹ್ನ 2.35ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಪಗ್ರಹ ಹಾರಾಟ ನಡೆಸಲಿದೆ. ಇದಕ್ಕೆ ಕೌಂಟ್ ಡೌನ್ ಈಗಾಗಲೇ ಆರಂಭವಾಗಿದೆ.

ಇನ್ನು  ಚಂದ್ರಯಾನ 3 ಮಿಷನ್’ಗೆ ಪುರುಷರಲ್ಲದೆ, ನಾರಿಶಕ್ತಿಯ ಬಲಕೂಡ ಇದ್ದು, ದೇಶದ ವಿಜ್ಞಾನ ಕ್ಷೇತ್ರದಲ್ಲಿ ಬಹುದೊಡ್ಡ ಮೈಲಿಗಲ್ಲು ಈ ಕ್ಷಣವಾಗಲಿದೆ. ಚಂದ್ರಯಾನ-3 ಮಿಷನ್ ಅನ್ನು ಪುರುಷರೇ ಮುನ್ನಡೆಸಿದರೂ, ಅದರ ಹಿಂದೆ ಸುಮಾರು 54 ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಅಷ್ಟೇ ಅಲ್ಲದೆ, ಚಂದ್ರಯಾನ-2 ಮಿಷನ್‌ ಗಿಂತ ಭಿನ್ನವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಚಂದ್ರಯಾನ-3 ಮಿಷನ್‌ ನಲ್ಲಿ ಸುಮಾರು 54 ಮಹಿಳಾ ಎಂಜಿನಿಯರ್‌ಗಳು/ವಿಜ್ಞಾನಿಗಳು ನೇರವಾಗಿ ಕೆಲಸ ಮಾಡಿದ್ದಾರೆ. ವಿವಿಧ ಕೇಂದ್ರಗಳಲ್ಲಿ, ವಿವಿಧ ವ್ಯವಸ್ಥೆಗಳ ಸಹಾಯಕ, ಉಪ ಯೋಜನಾ ನಿರ್ದೇಶಕರು ಮತ್ತು ಯೋಜನಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ” ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶ್ರೀಹರಿಕೋಟಾ ರಾಕೆಟ್ ಫೋರ್ಟ್ ಅಧಿಕಾರಿ ಮತ್ತು ರಾಕೆಟ್ ಉಡಾವಣೆ ಸಮಯದಲ್ಲಿ ವ್ಯಾಖ್ಯಾನಕಾರರಾಗಿ ಪಿ.ಮಾಧುರಿ ಕೆಲಸ ಮಾಡಲಿದ್ದು, ಇವರು ಮಾತ್ರ ಜನರಿಗೆ ಕಾಣಿಸುವ ಏಕೈಕ ISRO ಮಹಿಳೆಯಾಗಿದ್ದಾರೆ.

ಇನ್ನು ಚಂದ್ರಯಾನ-2 ಮಿಷನ್‌ ನಲ್ಲಿ ಇಬ್ಬರು ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಒಬ್ಬರು ಯೋಜನಾ ನಿರ್ದೇಶಕಿ ಎಂ.ವನಿತಾ ಮತ್ತೊಬ್ಬರು ಮಿಷನ್ ನಿರ್ದೇಶಕಿ ರಿತು ಕರಿದಾಲ್ ಶ್ರೀವಾಸ್ತವ. ಇನ್ನು ಈ ತಂಡದ ಮುಂದಾತ್ವವನ್ನು ಪುರುಷರೇ ತೆಗೆದುಕೊಂಡಿದ್ದಾರೆ. ಮಿಷನ್ ನಿರ್ದೇಶಕ ಮೋಹನ್ ಕುಮಾರ್, ರಾಕೆಟ್ ನಿರ್ದೇಶಕ ಬಿಜು ಸಿ. ಥಾಮಸ್ ಮತ್ತು ಬಾಹ್ಯಾಕಾಶ ನೌಕೆಯ ನಿರ್ದೇಶಕರು ಡಾ.ಪಿ.ವೀರಮುತ್ತುವೆಲ್ ಆಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು