News Karnataka Kannada
Monday, May 13 2024
ತಮಿಳುನಾಡು

ಸುಳ್ಳು ಕಥೆ ಹೇಳಿ ಎರಡನೇ ಮದುವೆಗೆ ಸಿದ್ದನಾಗಿದ್ದವನ ಬಂಧನ

Police Investigation 12 7 21
Photo Credit :

ಚೆನ್ನೈ: ವಂಚಕನೊಬ್ಬ ತನಗೆ ಅವಳಿ ಸಹೋದರನಿದ್ದಾನೆ ಎಂದು ಪ್ರೇಯಸಿಗೆ ನಂಬಿಸಿ ಎರಡನೇ ಮದುವೆಯಾಗಲು ಹೋಗಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಅರುಂಬಕ್ಕಂನ ವಾಲಾಂಡರ್ ಬೆನೆಟ್ ರಾಯನ್ ಎರಡನೇ ಮದುವೆಯಾಗಲು ಭರ್ಜರಿ ಪ್ಲ್ಯಾನ್ ರೂಪಿಸಿದ್ದ. ಅದು ಕೂಡ ಸಿನಿಮೀಯ ಶೈಲಿಯ ಡಬಲ್ ಆ್ಯಕ್ಟಿಂಗ್ ಮೂಲಕ ಎಂಬುದು ವಿಶೇಷ. ಆದರೆ ಈತ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿ ರಾಯನ್‍ಗೆ ಈ ಹಿಂದೆಯೇ ಮದುವೆಯಾಗಿತ್ತು. ಈ ದಂಪತಿಗೆ ಒಂದು ಮಗು ಇದೆ. ಇದಾಗ್ಯೂ 30 ವರ್ಷದ ರಾಯನ್ ತನ್ನ ಸಹೋದ್ಯೋಗಿ 21 ವರ್ಷದ ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆಸಿದ್ದ. ಈ ಸ್ನೇಹ ಪ್ರೇಮಕ್ಕೆ ತಿರುಗಿದೆ. ಆದರೆ ಮೊದಲ ಪತ್ನಿ ಹಾಗೂ ಮಗುವಿರುವ ವಿಷಯವನ್ನು ರಾಯನ್ ಆಕೆಯೊಂದಿಗೆ ಮರೆಮಾಚಿದ್ದ. ಅಲ್ಲದೆ ತನ್ನ ಪ್ರೇಯಸಿಯನ್ನು ವಿವಾಹವಾಗಲು ನಿರ್ಧರಿಸಿದ್ದನು. ನಿಶ್ಚಿತಾರ್ಥವನ್ನೂ ಯುವತಿಯ ಕುಟುಂಬದವರು ನಡೆಸಿಕೊಟ್ಟಿದ್ದರು. ಇದೇ ವೇಳೆ ರಾಯನ್ ವರದಕ್ಷಿಣೆಯಾಗಿ 3.5 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ತನ್ನ ಮೊದಲ ಮದುವೆ ವಿಚಾರ ಬಹಿರಂಗವಾದರೂ ಸಂಶಯ ಮೂಡದಂತೆ ಮಾಡಲು ತನಗೆ ಸಹೋದರನೊಬ್ಬನಿದ್ದಾನೆ ಎಂದು ಮೊದಲೇ ಕಥೆ ಕಟ್ಟಿದ್ದ.
ನಾವಿಬ್ಬರೂ ಅವಳಿ-ಜವಳಿ ಎಂದು ಸುಳ್ಳು ಹೇಳಿ ಯುವತಿಯನ್ನು ನಂಬಿಸಿದ್ದನು. ಈಗ ಅವನು ದುಬೈನಲ್ಲಿದ್ದಾನೆ ಎಂದು ತಿಳಿಸಿದ್ದ. ಅಷ್ಟೇ ಅಲ್ಲದೆ ಆಕೆಯನ್ನು ಮತ್ತಷ್ಟು ನಂಬಿಸಲು ಬೇರೊಂದು ಹೆಸರಿನಲ್ಲಿ ತನ್ನದೇ ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣಪತ್ರವನ್ನು ಸಿದ್ಧಪಡಿಸಿದ್ದನು. ಆದರೆ ಮದುವೆಗೆ ಇನ್ನೇನು ದಿನಗಳಿರುವಾಗ ಸಂಬಂಧಿಕರೊಬ್ಬರು ರಾಯನ್‍ಗೆ ಮದುವೆಯಾಗಿರುವ ವಿಚಾರವನ್ನು ಯುವತಿಗೆ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು