News Karnataka Kannada
Friday, May 03 2024
ದೇಶ

14ನೇ ಮಹಡಿಯಿಂದ ಹಾರಿ ಮಾಡೆಲ್‌ ಆತ್ಮಹತ್ಯೆ

Model Noida 29 6 21
Photo Credit :

ಲಖನೌ: ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ನೂರಾರು ಕನಸು ಹೊತ್ತಿದ್ದ ಯುವತಿಯೊಬ್ಬಳು ಅಪಾರ್ಟ್​ಮೆಂಟ್​ನ 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಪ್ರಿಯಾ ಅಲಿಯಾಸ್ ಭವಾನಿ ಮೂಲತಃ ದೆಹಲಿಯವಳಾಗಿದ್ದು, ಮಹಾರಾಷ್ಟ್ರದ ಮುಂಬೈನಲ್ಲಿ ನೆಲೆಸಿದ್ದಳು. ಮಾಡೆಲಿಂಗ್ ಕ್ಷೇತ್ರದಲ್ಲಿ ಎತ್ತರದ ಸ್ಥಾನಕ್ಕೇರುವ ಬಯಕೆಯಲ್ಲಿ ಅನೇಕೆ ಮಾಡೆಲಿಂಗ್ ಕೆಲಸಗಳನ್ನು ಮಾಡಿಕೊಂಡಿದ್ದಳು. ಈ ನಡುವೆ ಕರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ಸ್ವಲ್ಪ ದಿನ ತನ್ನ ಅಕ್ಕನೊಂದಿಗೆ ಇರುವುದಕ್ಕೆಂದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಪಟ್ಟಣದಲ್ಲಿದ್ದ ಅಕ್ಕನ ಮನೆಗೆ ತೆರಳಿದ್ದಾಳೆ. ಕರೊನಾ ನಿಯಂತ್ರಣಕ್ಕೆ ಮಾಡಲಾದ ಲಾಕ್​ಡೌನ್​ನಿಂದ ತನ್ನ ಜೀವನವೇ ಹಾಳಾಯಿತು ಎಂದು ಆಕೆ ಕೊರಗುತ್ತಿದ್ದಳಂತೆ. ಮಾಡೆಲಿಂಗ್​ನಲ್ಲಿ ನನ್ನ ಭವಿಷ್ಯ ಮುಂದುವರಿಯುವುದು ಕಷ್ಟವೆಂದು ಸಾಕಷ್ಟು ನೊಂದಿದ್ದಳಂತೆ. ಅದೇ ಬೇಸರದಲ್ಲಿದ್ದ ಆಕೆ ಸೋಮವಾರ ರಾತ್ರಿ 8.30ರ ಸಮಯಕ್ಕೆ ಅಪಾರ್ಟ್​ಮೆಂಟ್​ನ 14ನೇ ಮಹಡಿಯಲ್ಲಿದ್ದ ಅಕ್ಕನ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ ಆಕೆ ಅದಾಗಲೇ ಕೊನೆಯುಸಿರು ಎಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ವಿಚಾರದಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು