News Karnataka Kannada
Sunday, May 19 2024
ತಮಿಳುನಾಡು

ತಮಿಳುನಾಡು – ಕೇರಳ ನಡುವೆ ಸಂಚರಿಸುತ್ತಿದ್ದ ನಾಲ್ಕು ರೈಲು ಭಾಗಶಃ ರದ್ದು

Photo Credit :

ಚೆನ್ನೈ: ಅಕ್ಟೋಬರ್ 17 ಮತ್ತು 18 ರಂದು ತಮಿಳುನಾಡಿನಿಂದ ಕೇರಳಕ್ಕೆ ಮತ್ತು ಕೇರಳದಿಂದ ತಮಿಳುನಾಡಿಗೆ ಪ್ರಯಾಣಿಸುವ ಕನಿಷ್ಠ ನಾಲ್ಕು ರೈಲುಗಳು ಭಾಗಶಃ ರದ್ದುಗೊಳಿಸಲಾಗಿದೆ ಎಂದು ಭಾನುವಾರ ದಕ್ಷಿಣ ರೈಲ್ವೆ ತಿಳಿಸಿದೆ.

“17.10.2021 ರಂದು ಚೆನ್ನೈ ಎಗ್ಮೋರ್ ನಿಂದ ಹೊರಡುವ ವಿಶೇಷ ರೈಲು ಸಂಖ್ಯೆ 06101 ಚೆನ್ನೈ ಎಗ್ಮೋರ್ – ಕೊಲ್ಲಂ ರೈಲನ್ನು ಸೆಂಗೊಟ್ಟೈ ಮತ್ತು ಕೊಲ್ಲಂ ನಡುವೆ ರದ್ದುಗೊಳಿಸಲಾಗಿದೆ.

17.10.2021 ರಂದು ಹೊರಡುವ ರೈಲು ಸಂಖ್ಯೆ 06792 ಪಾಲಕ್ಕಾಡ್ – ತಿರುನೆಲ್ವೇಲಿ ವಿಶೇಷ ರೈಲು ಪ್ರಯಾಣಯನ್ನು ಪುನಲೂರು ಮತ್ತು ತಿರುನೆಲ್ವೇಲಿ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.

ಇದನ್ನು ಓದಿ: ಮಳೆಗೆ ಕೇರಳ ತತ್ತರ: ಪ್ರವಾಹ, ಭೂಕುಸಿತಕ್ಕೆ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆ; 11 ಮೃತದೇಹಗಳು ಪತ್ತೆ​

17.10.2021 ರಂದು ಹೊರಡುವ ರೈಲು ಸಂಖ್ಯೆ 06791 ತಿರುನೆಲ್ವೇಲಿ – ಪಾಲಕ್ಕಾಡ್ ವಿಶೇಷ ರೈಲನ್ನು ತಿರುನೆಲ್ವೇಲಿ ಮತ್ತು ಪುನಲೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.

18.10.2021 ರಂದು ಹೊರಡುವ ರೈಲು ಸಂಖ್ಯೆ 06102 ಕೊಲ್ಲಂ – ಚೆನ್ನೈ ಎಗ್ಮೋರ್ ವಿಶೇಷ ರೈಲು ಪ್ರಯಾಣವನ್ನು ಸೆಂಗೊಟ್ಟೈ ಮತ್ತು ಕೊಲ್ಲಂ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು