News Karnataka Kannada
Monday, May 13 2024
ತಮಿಳುನಾಡು

ತಮಿಳುನಾಡಿನ ಮಾಜಿ ಸಚಿವೆ ಆರ್. ಇಂದಿರಾ ಕುಮಾರಿ ಐದು ವರ್ಷಗಳ ಜೈಲು ಶಿಕ್ಷೆ

New Project (4)
Photo Credit :

ತಮಿಳುನಾಡು :   ತಮಿಳುನಾಡಿನ ಮಾಜಿ ಸಚಿವೆ ಆರ್. ಇಂದಿರಾ ಕುಮಾರಿ ಹಾಗೂ ಆಕೆಯ ಗಂಡನಿಗೆ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇಂದು ಈ ಬಗ್ಗೆ ವಿಚಾರಣೆ ನಡೆಸಿದ ತಮಿಳುನಾಡಿನ ಸಂಸದ, ಶಾಸಕರ ವಿಶೇಷ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ. ಇವರ ಜೊತೆಗೆ ಮಾಜಿ ಐಎಎಸ್​ ಅಧಿಕಾರಿ ಷಣ್ಮುಗಂ ಅವರಿಗೂ ಮೂರು ವರ್ಷಗಳ ಜೈಲು ಶಿಕ್ಷೆ ನೀಡಲಾಗಿದೆ.

1991ರಿಂದ 1996ರ ಅವಧಿಯಲ್ಲಿ ಎಐಎಡಿಎಂಕೆ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವೆಯಾಗಿದ್ದ ಇಂದಿರಾ ಕುಮಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಅವರಿಗೆ 5 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಹಾಗೇ, ಅವರ ಗಂಡ ಬಾಬು ಅವರಿಗೂ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಆ ಅವಧಿಯಲ್ಲಿ ಐಎಎಸ್​ ಅಧಿಕಾರಿಯಾಗಿದ್ದ ಷಣ್ಮುಗಂ ಅವರಿಗೆ 3 ವರ್ಷ ಜೈಲು ಶಿಕ್ಷೆ, ಇಂದಿರಾ ಕುಮಾರಿ ಅವರ ವೈಯಕ್ತಿಕ ಸಹಾಯಕರಾಗಿದ್ದ ವೆಂಕಟಕೃಷ್ಣನ್ ಅವರಿಗೆ 10,000 ರೂ. ದಂಡ ವಿಧಿಸಲಾಗಿದೆ.

ಮಾಜಿ ಸಚಿವೆ ಇಂದಿರಾ ಕುಮಾರಿ ವಿಕಲಚೇತನರಿಗಾಗಿ ಶಾಲೆ ಸ್ಥಾಪಿಸಲು ಇಂದಿರಾ ಕುಮಾರಿಯವರ ಪತಿ ಬಾಬು ನಡೆಸುತ್ತಿರುವ ಟ್ರಸ್ಟ್‌ಗೆ ನೀಡಲಾದ 15.45 ಲಕ್ಷ ರೂ. ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರು. ಜಯಲಲಿತಾ ಅವರ ಸರ್ಕಾರದಲ್ಲಿ ಸಮಾಜಕಲ್ಯಾಣ ಸಚಿವೆಯಾಗಿದ್ದ ಇಂದಿರಾ ಕುಮಾರಿ ಬಳಿಕ ಎಐಎಡಿಎಂಕೆ ತೊರೆದು ಡಿಎಂಕೆ ಪಕ್ಷ ಸೇರಿದ್ದರು.

ಇಂದು ಅವರಿಗೆ ಜೈಲು ಶಿಕ್ಷೆ ಪ್ರಕಟವಾಗುತ್ತಿದ್ದಂತೆ ತೀವ್ರವಾಗಿ ಅಸ್ವಸ್ಥಗೊಂಡ ಇಂದಿರಾ ಕುಮಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು