ಚೆನ್ನೈ : 14 ರಿಂದ 16 ವರ್ಷದೊಳಗಿನ ಬಾಲಪರಾಧಿಗಳಿದ್ದ ವಸತಿ ಗೃಹದಲ್ಲಿ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವಾರ್ಡನ್ನನ್ನು ತಿರುವಣ್ಣಾಮಲೈ ಪೊಲೀಸರು ಬಂಧಿಸಿದ್ದಾರೆ. ಬಾಲಕರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಈ ಬಗ್ಗೆ ಮಕ್ಕಳು ದೂರು ನೀಡಿದ ಹಿನ್ನಲೆಯಲ್ಲಿ, ಆರೋಪಿ ವಾರ್ಡನ್ ದುರೈಪಾಂಡ್ಯನ್ (36) ಪೊಲೀಸರು ಭಾನುವಾರ ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
ಕಳೆದ ಮೂರು ತಿಂಗಳಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮಕ್ಕಳು ಆರೋಪಿಸಿದ್ದಾರೆ.
ಸುಮಾರು 80 ಮಕ್ಕಳು, ಅನಾಥರು ಅಥವಾ ನೊಂದ ಕುಟುಂಬದಿಂದ ಬಂದವರಾಗಿದ್ದು, ಇಂತಹ ಮಕ್ಕಳಿಗಾಗಿ ಸರ್ಕಾರ ಮಕ್ಕಳ ಗೃಹಗಳನ್ನು ನಡೆಸುತ್ತಿದೆ. ವಾರ್ಡನ್ ಮಕ್ಕಳ ಮೇಲೆ ಕಳೆದ ಮೂರು ತಿಂಗಳಿಂದ 14ರಿಂದ 16 ವರ್ಷದೊಳಗಿನ ಬಾಲಕರ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ. ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡಿದ ನಂತರ ಜಿಲ್ಲಾ ಮಕ್ಕಳ ರಕ್ಷಣಾ ಕಚೇರಿ (ಡಿಸಿಪಿಒ), ಚೈಲ್ಡ್ಲೈನ್ ಮತ್ತು ಪೊಲೀಸ್ ಅಧಿಕಾರಿಗಳ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಚೆಟ್ಪೇಟ್ ಪೊಲೀಸರು ದುರೈಪಾಂಡಿಯನ್ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಿಸುವ (ಪೋಕ್ಸೊ) ಕಾಯ್ದೆಯ ಸೆಕ್ಷನ್ 7,8, 19 (1) ಮತ್ತು 21 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲಾಪರಾಧಿ ಕಾಯ್ದೆಯ ಸೆಕ್ಷನ್ 75 ಮತ್ತು ಐಪಿಸಿಯ ಸೆಕ್ಷನ್ 506 (1) ಅಡಿಯಲ್ಲಿ ಕೂಡ ದೂರು ದಾಖಲಾಗಿದೆ.