ಚೆನ್ನೈ : ನೊಲಂಬೂರ್ ಎಂಬಲ್ಲಿ 9 ವರ್ಷದ ಬಾಲಕಿ ಮೇಲೆ ಜರ್ಮನ್ ಶೆಫರ್ಡ್ ನಾಯಿಯೊಂದು ಪ್ರಾಣಾಂತಿಕ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಯಿಯ ಮಾಲಕಿಯನ್ನು ಬಂಧಿಸಿದ್ದಾರೆ.
ಘಟನೆ ಡಿಸೆಂಬರ್ 28 ರಂದು ನಡೆದಿದ್ದು, ಬಾಲಕಿ ಪೋಷಕರು ಸೋಮವಾರ ದೂರು ದಾಖಲಿಸಿದ್ದಾರೆ. ದಾರಿಯಲ್ಲಿ ಸಾಗುತ್ತಿದ್ದ ವೇಳೆ ಬಾಲಕಿ ಸರಸ್ವತಿಯನ್ನು ನಾಯಿ ಅಟ್ಟಿಸಿಕೊಂಡು ಹೋಗಿತ್ತು. ಈ ಸಂದರ್ಭ ಬಾಲಕಿಯ ದೇಹದ 16 ಭಾಗಗಳಲ್ಲಿ ನಾಯಿ ಕಚ್ಚಿ ಘಾಸಿ ಮಾಡಿತ್ತು.
ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಬಾಲಕಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದಾಳೆ. ಈ ಸಮಯದಲ್ಲಿ ಪೋಷಕರು ಪೊಲೀಸ್ ದೂರು ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಯಿಯ ಮಾಲಕಿ 43 ವರ್ಷದ ಮಹಿಳೆ ವಿಜಯಲಕ್ಷ್ಮಿ ಎಂಬುವವರನ್ನು ಬಂಧಿಸಿದ್ದಾರೆ. ನಾಯಿಯನ್ನು ಕಾರ್ಪೊರೇಷನ್ ಅಧಿಕಾರಿಯೋರ್ವರಿಗೆ ಹಸ್ತಾಂತರಿಸಲಾಗಿದೆ.