ರಾಜಸ್ಥಾನ: ಜೈಪುರ ಮತ್ತು ಕೋಟಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದಕ್ಕಾಗಿ ರಾಜಸ್ಥಾನದ ಕೋಟಾದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಇಬ್ಬರು ಸದಸ್ಯರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಂದು(ನ.03) ಬಂಧಿಸಿದೆ. ಜೊತೆಗೆ ಪಿಎಫ್ಐನ ಇತರ ಮೂವರನ್ನು ಕೂಡ ವಶಕ್ಕೆ ಪಡೆದಿದೆ.
ಎನ್ಐಎ ಪ್ರಕಾರ, ಬಂಧಿತರನ್ನು ವಾಜಿದ್ ಅಲಿ ಮತ್ತು ಮುಬಾರಿಕ್ ಅಲಿ ಎಂದು ಗುರುತಿಸಲಾಗಿದೆ, ಜೊತೆಗೆ ಪಿಎಫ್ಐನ ಇತರ ಮೂವರು ಸದಸ್ಯರಾದ ಮೊಹಮ್ಮದ್ ಆಸಿಫ್, ಸಾದಿಕ್ ಸರ್ರಾಫ್ ಮತ್ತು ಮೊಹಮ್ಮದ್ ಸೊಹೈಲ್ನನ್ನು ಕೂಡ ವಶಕ್ಕೆ ಪಡೆದಿದೆ.
ರಾಜಸ್ಥಾನ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಮುಸ್ಲಿಂ ಯುವಕರನ್ನು ತೊಡಗಿಸಿಕೊಳ್ಳುವಲ್ಲಿ ಸಾದಿಕ್ ಸರ್ರಾಫ್ ಮತ್ತು ಮೊಹಮ್ಮದ್ ಆಸಿಫ್ ಭಾಗಿಯಾಗಿದ್ದಾರೆ ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ.