News Karnataka Kannada
Saturday, April 27 2024
ರಾಜಸ್ಥಾನ

ದೇಶದ ಇತಿಹಾಸದಲ್ಲಿ ಇದೇ ಮೊದಲು : ರಾಜಸ್ಥಾನದಲ್ಲಿ ಕಾಣಿಸಿಕೊಂಡ ಗುಲಾಬಿ ಚಿರತೆ

Latest News
Photo Credit :

ದೇಶದ ಇತಿಹಾಸದಲ್ಲಿ ಗುಲಾಬಿ ಚಿರತೆ ಕಂಡಿರುವುದು ಇದೇ ಮೊದಲು. ರಾಜಸ್ಥಾನದ ಪಾಳಿ ಜಿಲ್ಲೆಯ ರಣಕ್‌ಪುರ ಪ್ರದೇಶದಲ್ಲಿ ಸ್ಥಳೀಯರ ಕಣ್ಣಿಗೆ ಗುಲಾಬಿ ಚಿರತೆ ಕಂಡಿದೆ.

ಭಾರತದಲ್ಲಿ ಸಾಮಾನ್ಯ ಮಸ್ಟರ್ಡ್ ಬಣ್ಣದ ಅಥವಾ ಕಂದು ಬಣ್ಣದ ಚಿರತೆಗಳನ್ನು ಮಾತ್ರ ಕಂಡಿದ್ದೇವೆ. ಇದೇ ಮೊದಲ ಬಾರಿಗೆ ಪಿಂಕ್ ಚಿರತೆ ಕಾಣಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಂದು ಹಾಗೂ ಗುಲಾಬಿ ಬಣ್ಣದ ಚರ್ಮವನ್ನು ಇದು ಹೊಂದಿದೆ. ಉದಯಪುರ ಮೂಲದ ವನ್ಯಜೀವಿ ಸಂರಕ್ಷಣಾಧಿಕಾರಿ ಮತ್ತು ಛಾಯಾಗ್ರಾಹಕ ಹಿತೇಶ್ ಮೋಟ್ವಾನಿ ಸತತ ನಾಲ್ಕು ದಿನ ಈ ಚಿರತೆಗಾಗಿ ಹುಡುಕಾಟ ನಡೆಸಿ, ಕೊನೆಗೂ ಫೋಟೊ ಸೆರೆಹಿಡಿದಿದ್ದಾರೆ. ಈ ಚಿರತೆಗೆ ಐದರಿಂದ ಆರು ವರ್ಷ ವಯಸ್ಸಾಗಿರಬಹುದು ಎನ್ನಲಾಗಿದೆ.

ಕಂಭಲ್‌ಗಢ ಅರಣ್ಯಪ್ರದೇಶ 600 ಚದರ ಕಿ.ಮೀಯಷ್ಟಿದ್ದು, ಚಿರತೆ, ತೋಳ, ಕತ್ತೆಕಿರುಬ ಮುಂದಾದ ಪ್ರಾಣಿಗಳು ಅಲ್ಲಿ ವಾಸವಾಗಿವೆ. ಆದರೆ ಇದೇ ಮೊದಲ ಬಾರಿಗೆ ಪಿಂಕ್ ಚಿರತೆ ಕಾಣಿಸಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು